ಶೌರ್ಯ ಜಾಗರಣ ರಥ ಯಾತ್ರೆಗೆ ಅದ್ದೂರಿ ಸ್ವಾಗತ

ಇಂಡಿ:ಅ.14: ವಿಶ್ವಹಿಂದೂ ಪರಿಷದ್ ಬಜರಂಗದಳ ನೈತೃತ್ವದಲ್ಲಿ ಹಮ್ಮಿಕೊಂಡ ಶೌರ್ಯ ಜಾಗರಣ ರಥ ಯಾತ್ರೆ ಇಂಡಿ ನಗರಕ್ಕೆ ಆಗಮಿಸಿತು ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರುಷತ್ ಬಜರಂಗ ದಳ ಕಾರ್ಯಕರ್ತರು ಕಾಸುಗೌಡ ಬಿರಾದಾರ, ಹಾಗೂ ಗಣ್ಯರು ಅದ್ದೂರಿಯಾಗಿ ಸ್ವಾಗತಿಸಿದರು.

ವಿಶ್ವಹಿಂದೂ ಪರಿಷತ್ ಪ್ರಾಂತ ಮುಖಂಡ ಪುಂಡಲೀಕ ದಳವಾಯಿ,ಶ್ರೀಮಂತ ದುದ್ದಗಿ, ನೇತಾಜಿ ಪವಾರ, ಸುನೀಲ ದಳವಾಯಿ ಮಾತನಾಡಿ ವಿಶ್ವ ಹಿಂದೂ ಪರಿಷತ್ 60 ವರ್ಷ ಪಾದಾರ್ಪಣೆ ಮಾಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯೆಂತ ಸೆ,30ರಿಂದ ಅಕ್ಟೋಬರ್ 16ರವರೆಗೆ ಶೌರ್ಯ ಜಾಗರಣ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿಶ್ವ ಹಿಂದೂ ಪರಿಷತ್ ಸಂಘಟನೆಯ ಮೇಲೆ ಅನೇಕ ಪರಕಿಯರ ಧಾಳಿಗಳು ಒಳಕುತಂತ್ರಗಳು ನಡದಿವೆ ಆದರೆ ಧಿಟ್ಟ ಪರಾಕ್ರಮ ಶೌರ್ಯಗಳಿಂದ ವೈರಿಗಳನ್ನು ಮೆಟ್ಟಿ ನಿಂತ ಏಕೈಕ ಸಂಘಟನೆ ವಿಶ್ವ ಹಿಂದೂ ಪರಿಷತ್ ಮಾತ್ರ. ಸನಾತನ ಧರ್ಮ ರಕ್ಷಣೆ ಹಿಂದೂ ಸಂಸ್ಕøತಿ ಪರಂಪರೆ ಎತ್ತಿ ಹಿಡಿಯುವಲ್ಲಿ ಹಿಂದಿನ ವಿಶ್ವ ಹಿಂದೂ ಪರಿಷತ್ ಅನೇಕ ಸಂಘಟಕರು ತ್ಯಾಗ ಬಲಿದಾನ ನೀಡಿದ್ದಾರೆ. ಅವರೇಲ್ಲರ ತ್ಯಾಗ ಬಲಿಧಾನ ದಿಂದ ಸನಾತನ ಧರ್ಮ ಸುರಕ್ಷಿತವಾಗಿದೆ. ಲವ.ಜೀಹಾದಿ ಮತಾಂತರ ಇಂತಹ ಪಿಡುಗುಗಳನ್ನು ಮಟ್ಟ ಹಾಕಬೇಕು. ಗೋಹತ್ಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
,ಕಾಸುಗೌಡ ಬಿರಾದಾರ, ಸಂತೋಷ ನಾಯಕ, ಮಲ್ಲಿಕಾರ್ಜುನ ಬಿರಾದಾರ, ಅಶೋಕ ಅಕಲಾದಿ, ಸೋಮಶೇಖರ ನಿಂಬರಗಿಮಠ, ಅನೀಲಗೌಡ ಬಿರಾದಾರ, ರಾಮಸಿಂಗ ಕನ್ನೋಳ್ಳಿ, ಶ್ರೀಧರ ಕ್ಷತ್ರಿ, ಮಹಾಂತೇಶ ಪಾಟೀಲ, ಶಂಕರ ಹಲವಾಯಿ ,ಪ್ರಕಾಶ ಬಿರಾದಾರ,ನೇತಾಜಿ ಪವಾರ ಸೇರಿದಂತೆ ವಿಶ್ವಹಿಂದೂ ಪರಿಷತ್ ಪದಾಧಿಕಾರಿಗಳು ಪಟ್ಟಣದ ಮುಖಂಡರು ಇದ್ದರು.