ಶೌಚಾಲಯ ಮೇಲ್ಛಾವಣಿ ಕುಸಿದು ಮೂವರಿಗೆ ಗಾಯ

ವಿಜಯಪುರ,ಜು 21: ಸುರಿಯುತ್ತಿರುವ ಮಳೆಗೆ ನೆನೆದು ಸಾರ್ವಜನಿಕ ಶೌಚಾಲಯ ಮೇಲ್ಛಾವಣಿ ಕುಸಿದು ಬಿದ್ದು ಮೂವರು ಮಹಿಳೆಯರು ಗಾಯಗೊಂಡ ಘಟನೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಇಂದು ನಡೆದಿದೆ.
ಶೌಚಾಲಯದಲ್ಲಿ ಸಿಲುಕಿಕೊಂಡ ಮೂವರು ಮಹಿಳೆಯರನ್ನು ತಕ್ಷಣವೇ ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಕಮಲಾಬಾಯಿ ಬಗಲಿ,ಮುಸ್ಕಾನ್ ಕೊಲ್ಹಾರ, ಮುರ್ತುಜಭೀ ಭಾಂಗಿ ಎಂಬ ಮೂವರಿಗೆ ಗಾಂiÀiಗಳಾಗಿವೆ.ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.