ಶೌಚಾಲಯ ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷ ಹನುಮಂತಪ್ಪ

ಸೇಡಂ,ಜೂ,18: ತಾಲೂಕಿನ ಹಂಗನಹಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜಶ್ರೀ ಸಿಮೆಂಟ್ ಕಂಪನಿಯಿಂದ ನಿರ್ಮಿಸಿರುವ ಶೌಚಾಲಯ ಮತ್ತು ಮೂತ್ರಾಲಯದ ಕಟ್ಟಡವನ್ನು ಊಡಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹನುಮಂತಪ್ಪ ಬೆನಕನಹಳ್ಳಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಸಿಮೆಂಟ್ ಕಂಪನಿಯಿಂದ ನಿರ್ಮಿಸಲಾಗಿದ್ದ ಶೌಚಾಲಯವನ್ನು ಪ್ರತಿ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಶಾಲಾ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಿದರು. ಈ ವೇಳೆಯಲ್ಲಿ ಸಿಎ???ರ್ ಇಲಾಖೆ ಅಧಿಕಾರಿ ದಿನೇಶ್ ನಾಯ್ಕ, ಆರ್‍ಸಿಡಬ್ಲ್ಯು ಅಧಿಕಾರಿಗಳಾದ ಗಿರೀಶ್ ಕಾಜಗಾರ, ಪಾಂಡುರಂಗ, ಕಾಶಿ ಬಾಯಿ, ಸೋಮಶೇಖರ್, ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ,ಮಹಾದೇವಿ, ಸದಸ್ಯರಾದ ಸುಬ್ಬಣ್ಣ ಜಮಾದಾರ, ಭರ್ಮ ಗೌಡ, ಸೂರ್ಯಕಾಂತ್,ಶಾಲಾ ಮುಖ್ಯ ಗುರುಗಳಾದ ನರಸಪ್ಪ ಸ್ವಾಗತಿಸಿದರೆ ಸಿಆರ್‍ಪಿ ಹಂಪಯ್ಯ ವಂದಿಸಿದರು