ಶೌಚಾಲಯದ ಸಮರ್ಪಕ ಬಳಕೆಗೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ , ನ,19- ಪ್ರತಿಯೊಂದು ಕುಟುಂಬವು ಶೌಚಾಲಯವೊಂದಿರಬೇಕು ಮತ್ತು ಆ ಶೌಚಾಲಯವನ್ನು ಸಮರ್ಪಕವಾಗಿ ಬಳಸಿ, ಸ್ವಚ್ಛ ಗ್ರಾಮವನ್ನಾಗಿ ನಿರ್ಮಿಸಿ ಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು  ಹಮ್ಮಿಕೊಂಡಿದ್ದ ವಿಶ್ವ ಶೌಚಾಲಯ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದ ಅವರು ಶುದ್ಧವಾದ ಗಾಳಿ, ಶುದ್ಧವಾದ ನೀರು ಹಾಗೂ ಸ್ವಚ್ಛವಾದ ಪರಿಸರದಿಂದ ಸದೃಢ ಸಮಾಜ ನಿರ್ಮಾಣ ಮಾಡಬಹುದು ಎಂದರು.
ನಂತರ ಶಾಲಾ ಮಕ್ಕಳೊಂದಿಗೆ ಪ್ರಭಾತ್ ಪೇರಿಯನ್ನು ನಡೆಸಿ,ಸ್ವಚ್ಛತೆಗೆ ಸಂಬಂಧಿಸಿದ ಘೋಷಣೆ ಕೂಗಿಸಲಾಯಿತು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಿಂಗಮೂರ್ತಿ,ಶಿಕ್ಷಕರಾದ ವಿ.ಬಸವರಾಜ, ಮೋದಿನ್ ಸಾಬ್,ರಾಮಾಂಜಿನೇಯ,ಗುರುಪ್ರಸಾದ್, ಅಂಗನವಾಡಿ ಶಿಕ್ಷಕರಾದ ಶ್ರೀದೇವಿ, ಊರಿನ ಹಿರಿಯರಾದ ದೊಡ್ಡ ಕೆರಾಳಪ್ಪ, ಗ್ರಾಮ ಪಂಚಾಯಿತಿ ಕ್ಲರ್ಕ್ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.