ಶೌಚಾಲಯದೊಳಗೆ ಬಿದ್ದು ಮೃತ್ಯು

ಸುಳ್ಯ, ಎ.೯- ಅಮಲು ಸೇವಿಸಿದ ವ್ಯಕ್ತಿಯೊಬ್ಬರು ಶೌಚಾಲಯದೊಳಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಚ್ಚತಗಾರನಾಗಿರುವ ಐವರ್ನಾಡಿನ ಕುಳ್ಳಂಪಾಡಿ ಸುಂದರ (೪೨) ಮೃತಪಟ್ಟವರು. ಕುಡಿತದ ಚಟವಿರುವ ಸುಂದರರು ಬುಧವಾರ ಕೆಲಸಕ್ಕೆ ಬಂದಿದ್ದರು. ಶೌಚಾಲಯ ಸ್ವಚ್ಚಗೊಳಿಸುವ ಸಂದರ್ಭ ಅಲ್ಲೆ ಕುಸಿದು ಮೃತಪಟ್ಟರು. ಗುರುವಾರ ಬೆಳಿಗ್ಗೆ ಕಾಲೇಜಿಗೆ ಬಂದವರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪೋಲೀಸರು ಬಂದು ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.