ಶೌಚಾಲಯಗಳ ದುಸ್ಥಿತಿ ಸರಿಪಡಿಸಲು ಮನವಿ


ಚಿತ್ರದುರ್ಗ.ನ.೧೧: ಅಂಗನವಾಡಿ ನೀರಿನ ಸಮಸ್ಯೆ ಹಾಗೂ ಶೌಚಾಲಯಗಳ ದುಸ್ಥಿತಿ ಸರಿಪಡಿಸಬೇಕು ಎಂದು ಒತ್ತಾಯಿಸಿ ಇಂಡಿಯನ್ ಮೀಡಿಯಾ ಕೌನ್ಸಿಲ್ ನವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ೬ ತಾಲ್ಲೂಕುಗಳಲ್ಲಿರುವ ಅಂಗನವಾಡಿಗಳಲ್ಲಿ ಬಹುತೇಕ ಶೌಚಾಲಯಗಳು ಇಲ್ಲದೆ ಮಕ್ಕಳಿಗೆ ತೊಂದರೆಯಾಗುತ್ತಿದೆ. ಒಂದೇಡೆ ಶೌಚಾಲಯಗಳು ಇದ್ದರು ಕೂಡ ಸುಸ್ಥಿತಿಯಲ್ಲಿ ಇಲ್ಲ ಎಂದು ದೂರಿದರು. ಸರ್ಕಾರ ನೀಡುವ ಆಹಾರದ ಕಿಟ್ ಗಳು ಗುಣಮಟ್ಟದಲ್ಲಿ ಇಲ್ಲ. ಹಾಳಾಗಿರುವ ಮತ್ತು ಹುಳ ಬಿದ್ದಿರುವ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಇಂತಹ ಆಹಾರವನ್ನು ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಸೇವನೆ ಮಾಡುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಅಂಗನವಾಡಿ ಕೇಂದ್ರಗಳತ್ತ ಗಮನಹರಿಸಿ ಸೂಕ್ತ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವಲ್ಲಿ ಮುಂದಾಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಸಿದರು. ಈ ವೇಳೆ ಇಂಡಿಯನ್ ಮೀಡಿಯಾ ಕೌನ್ಸಿಲ್ ಜಿಲ್ಲಾಧ್ಯಕ್ಷ ಭಟ್ರಹಳ್ಳಿ ಧನಂಜಯ, ಹನುಮಂತರಾಜು,ಶಿವರಾಜ್, ಮಹಂತೇಶ್,ವಿಜಯ್ ಸದಾನಂದ ಸೇರಿದಂತೆ ಇತರರು ಹಾಜರಿದ್ದರು.