ಶೌಚಾಲಯಕ್ಕೆ ಬೀಗ.. ! ಮಹಿಳಾ ಪ್ರಯಾಣಿಕರ ಪರದಾಟ

ಕೂಡ್ಲಿಗಿ.ಜ.14:- ನಿತ್ಯ ನೂರಾರು ಪ್ರಯಾಣಿಕರು ಬಂದೋಗುವ ಕೂಡ್ಲಿಗಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ರಿಪೇರಿ ಮಾಡುವ ನೆಪದಲ್ಲಿ ಮೂರ್ನಾಕು ದಿನದ ಹಿಂದೆ ಬೀಗ ಜಡಿದಿದ್ದು ಮಹಿಳಾ ಪ್ರಯಾಣಿಕರಂತೂ ದಿನ ನಿತ್ಯ ಪರದಾಡುತ್ತ ಸಾರಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬರುತ್ತಿದೆ.
ಬಳ್ಳಾರಿ ಜಿಲ್ಲೆಯ ಅತ್ಯಂತ ಹಳೇ ಘಟಕಗಳಲ್ಲಿ ಒಂದಾಗಿರುವ ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕ ಮೊದಲು ಗುಲ್ಬರ್ಗ ಕೇಂದ್ರದಲ್ಲಿ ಅತ್ಯಂತ ಆದಾಯ ತರುವ ಘಟಕ ವಾಗಿತ್ತು ಆದರೆ ಹೊಸಪೇಟೆ ವಿಭಾಗಕ್ಕೆ ಸೇರಿದ ನಂತರ ಅಧಿಕಾರಿ ವರ್ಗದಿಂದಲೇ ಅಭಿವೃದ್ಧಿ ಕುಂಠಿತವಾಗಿದ್ದು ಸುಮಾರು 30ಕ್ಕೂ ಹೆಚ್ಚು ಮಾರ್ಗಗಳನ್ನು ಬೇರೆ ಘಟಕಗಳಿಗೆ ವರ್ಗಾಯಿಸುವುದು, ಅಭಿವೃದ್ಧಿಗೊಳಿಸಲು ಹಿಂದೇಟು ಹಾಕುವುದು ಬಸ್ ಕೊಡುವಲ್ಲಿಯೂ ಕೂಡ್ಲಿಗಿ ಘಟಕಕ್ಕೆ ತಾರತಮ್ಯ ಮಾಡುವ ಜೊತೆಗೆ ಕೂಡ್ಲಿಗಿ ಘಟಕದ ಹೊಸ ಬಸ್ ಗಳನ್ನು ಬೇರೆ ಘಟಕಕ್ಕೆ ನೀಡಿ ಅಲ್ಲಿಂದ ಹಳೇ ಬಸ್ ಕೊಡುವ ತಾರತಮ್ಯ ವಿಭಾಗೀಯ ಅಧಿಕಾರಿವರ್ಗದಿಂದ ಕಂಡುಬರುತ್ತಿದ್ದು ಘಟಕದೊಳಗಿನ ಕರ್ಮಕಾಂಡ ಒಂದೆಡೆಯಾದರೆ ಇತ್ತ ನಿಲ್ದಾಣದ ಅಭಿವೃದ್ಧಿಯ ಬಗ್ಗೆ ಹೇಳಲು ನಾಚಿಕೆಯಾಗುತ್ತದೆ ಸುಮಾರು ವರ್ಷಗಳ ಕಾಲ ನಿಲ್ದಾಣ ತಾರುವ್ಯವಸ್ಥೆ ಕಾಣದೆ ಇದ್ದಾಗ ಸ್ಥಳೀಯ ಮುಖಂಡರ ಕೆಲ ಹೋರಾಟದಿಂದ ನಿಲ್ದಾಣಕ್ಕೆ ಸಿಮೆಂಟ್ ರಸ್ತೆ ಆಗಿದ್ದು ಈಗ ನೋಡಲು ಪರವಾಗಿಲ್ಲ ಎಂಬಂತಾಗಿದ್ದು ಇಲ್ಲಿ ಬಂದೋಗುವ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಬೈಕ್ ನಿಲ್ಲುವ ಸ್ಥಳ ನಿಗದಿಗೊಳಿಸಿಲ್ಲ ರಾತ್ರಿ ಪಾಳಯದ ಬಸ್ ಗಳು ನಿಲ್ದಾಣದ ಹೊರಗೆ ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆ ತಂದು ನಿಲ್ಲಿಸದೆ ಎಲ್ಲೆಂದರಲ್ಲಿ ಇಳಿಸುವುದು ಕಂಡುಬರುತ್ತಿದ್ದು ಸಾರ್ವಜನಿಕರ ಸೇವೆಗಿರುವ ಸಾರಿಗೆ ಸಂಸ್ಥೆ ರಸ್ತೆ ಮದ್ಯೆ ಬಿಟ್ಟು ಹೋಗುವ ಬದಲು ರಾತ್ರಿ 12ಗಂಟೆವರೆಗೆ ನಿಲ್ದಾಣಕ್ಕೆ ಬಂದೊದರೆ ನಿಮ್ಮ ಸಾರಿಗೆ ಸಂಸ್ಥೆ ಸೇವೆ ಸಾರ್ಥಕವಾಗುತ್ತದೆ ಮತ್ತು ಇಲ್ಲಿನ ನಿಲ್ದಾಣದ ಶೌಚಾಲಯದ ಪಾಡಂತೂ ಹೇಳತೀರದು ಮಲಮೂತ್ರದ ವಾಸನೆ ಇಡೀ ನಿಲ್ದಾಣವನ್ನೇ ಆವರಿಸುವುದು ರಸ್ತೆ ಮದ್ಯೆದಲ್ಲೇ ಮೂತ್ರ ಹರಿಯುವ ಗುಂಡಿ ತುಂಬಿ ಅದರ ಮೂತ್ರದ ನೀರು ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಸ್ವಾಗತಿಸುತ್ತದೆ ಅದನ್ನು ದಾಟಿ ಪ್ರಯಾಣಿಕರು ಬರಬೇಕಾದ ಪರಿಸ್ಥಿತಿ ಇಂದು ನಿನ್ನೆಯದಲ್ಲ ಅದೆಷ್ಟೋ ಪ್ರಯಾಣಿಕರು ಕಂಟ್ರೋಲರ್ ಬಳಿ ಇದರ ಸಂಬಂಧ ಜಗಳಕ್ಕಿಳಿದ ಉದಾಹರಣೆಗಳಿವೆ ಇದೀಗ ಶೌಚಾಲಯ ಗುಂಡಿ ಸರಿಪಡಿಸುವ ನಿಟ್ಟಿನಲ್ಲಿ ಶೌಚಾಲಯಕ್ಕೆ ಬೀಗ ಹಾಕಿದ್ದು ಮಹಿಳಾ ಪ್ರಯಾಣಿಕರಿಗೆ ಪರ್ಯಾಯವ್ಯವಸ್ಥೆ ಇಲ್ಲದೆ ದಿನ ನಿತ್ಯ ಬಂದೋಗುವ ಮಹಿಳಾ ಪ್ರಯಾಣಿಕರು ಶೌಚಾಲಯವಿಲ್ಲದೆ ಪರದಾಡುತ್ತಿದ್ದಾರೆ. ಬೀದಿ ದೀಪ ವ್ಯವಸ್ಥೆ ಅಷ್ಟಕ್ಕಷ್ಟೇ ಕರೆಂಟು ಹೋದರೆ ಜನರೇಟರ್ ವ್ಯವಸ್ಥೆ ಸಹ ಇಲ್ಲಾ ಕತ್ತಲಲ್ಲೇ ಪ್ರಯಾಣಿಕರು ಕುಳಿತುಕೊಳ್ಳುವ ಪರಿಸ್ಥಿತಿ ಇದೆ ಇಲ್ಲಿ ಕಳ್ಳತನವಾದರೆ ಅದಕ್ಕೆ ಸಾರಿಗೆ ಸಂಸ್ಥೆಯವರೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಇದೆಲ್ಲಾ ಗಮನಕ್ಕಿದ್ದರು ಇದಕ್ಕೆ ಸಂಬಂದಿಸಿದ ವಿಭಾಗೀಯ ಇಂಜಿನಿಯರ್ ಹಾಗೂ ಇತರೆ ಅಧಿಕಾರಿಗಳು ಕೂಡ್ಲಿಗಿ ಪರಿಸ್ಥಿತಿಯನ್ನು ಸರಿಪಡಿಸದೆ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದು ಸಂಬಂದಿಸಿದ ಅಧಿಕಾರಿಗಳಿಂದಲೇ ಕೂಡ್ಲಿಗಿ ಘಟಕದ ಅಭಿವೃದ್ಧಿಗೆ ಗ್ರಹಣ ಬಡಿದಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಸಾರ್ವಜನಿಕರ ಪ್ರಯಾಣಕ್ಕೆ ಸಾರಿಗೆ ಸಂಸ್ಥೆ ಬಸ್ ಬಳಸಿಕೊಳ್ಳುವಂತೆ ಬರೀ ಜಾಹಿರಾತಿಗೆ ಸೀಮಿತವಾಗಿರುವಂತಿದೆ ಬಸ್ ನಿಲ್ದಾಣದಲ್ಲೇ ಶೌಚಾಲಯ ವ್ಯವಸ್ಥೆ ಸರಿಯಾಗಿ ಕಲ್ಪಿಸದೆ ಇದ್ದು ಮಹಿಳಾ ಪ್ರಯಾಣಿಕರಂತೂ ಕೂಡ್ಲಿಗಿ ನಿಲ್ದಾಣದಲ್ಲಿ ಪರದಾಡುತ್ತಿದ್ದರು ಶೌಚಾಲಯ ರಿಪೇರಿ ಆಗುವವರೆಗೆ ಮಹಿಳಾ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಮಹಿಳಾ ಪ್ರಯಾಣಿಕರು ಶೌಚಕ್ಕೆ ಎಲ್ಲಿ ಹೋಗಬೇಕು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳೇ ಉತ್ತರಿಸಬೇಕು ಮತ್ತು ಅವರ ಕುಟುಂಬ ಹೀಗೆ ಬೀದಿ ಬದಿಯಲ್ಲಿ ಶೌಚಕ್ಕೆ ಕಳಿಸುತ್ತಾರೆಯೇ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಹೆಸರು ಹೇಳಬಯಸದ ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿದರು.