ಶೋಷಿತ ಸಮಾಜ ಸಂಘಟಿತರಾಗಬೇಕು :ಮಾಂತೇಶ್ ಬಡದಾಳ

ಜೇವರ್ಗಿ:ನ.6: ಶೋಷಿತ ಸಮಾಜ ಸಂಘಟಿತರಾಗಬೇಕು ಒಂದು ಮಾಂತೇಶ್ ಬಡದಾಳ ಹೇಳಿದರು ನೂತನ ಯಡ್ರಾಮಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣಕ್ಕೆ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಂಚಾಲಕರಾದ ಅರ್ಜುನ ಭದ್ರೆರವರ ಆದೇಶದ ಮೇರೆಗೆ, ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಡದಾಳ ರವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಯಡ್ರಾಮಿ ತಾಲೂಕಿನ ನೂತನ ಸಂಚಾಲಕರಾಗಿ ಬಸವರಾಜ ಹೊಸಮನಿ ಕಾಚಾಪೂರ, ಸಂಘಟನಾ ಸಂಚಾಲಕರಾಗಿ ವಿಶ್ವನಾಥ ಕಣಮೇಶ್ವರ, ಜಟ್ಟೆಪ್ಪ ಶಖಾಪೂರ, ಗುರುರಾಜ ಬಡಿಗೇರ ಹರನಾಳ ಹಾಗೂ ಖಜಾಂಚಿಯಾಗಿ ಸುರೇಶ ಸೈದಾಪೂರ ಮತ್ತು ಸಾಂಸ್ಕøತಿಕ ಸಮಿತಿ ಸಂಚಾಲಕರಾಗಿ ಪರಶುರಾಮ ಹರನಾಳ ನೇಮಕವಾಗಿದ್ದಾರೆ.
ಜೇವರ್ಗಿ ತಾಲೂಕು ಸಮಿತಿಯ ಪೂರ್ಣ ಪ್ರಮಾಣ ಪದಾಧಿಕಾರಿಗಳ ಸಂಚಾಲಕರಾಗಿ ಮಹೇಶ ಕೋಕಿಲೆ ವರವಿ, ಸಂಘಟನಾ ಸಂಚಾಲಕರಾಗಿ ವಿಜಯಕುಮಾರ್ ಸಜ್ಜನ, ರಮೇಶ ಬಿರಾಳ ಕೆ, ಸಿದ್ದು ಎಸ್ ಹುಲ್ಲೂರ, ಖಜಾಂಚಿಯಾಗಿ ಪ್ರಕಾಶ ಹರವಾಳ ಸಂಚಾಲಕರು ಭೀಮರಾಯ ಹರನಾಳ ಸಾಂಸ್ಕೃತಿಕ ಸಮಿತಿ ರವರು ರಾಜ್ಯ ಸಂಚಾಲಕರಾದ ಅರ್ಜುನ ಭದ್ರೆರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಡದಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಆಯ್ಕೆ ಸಭೆಯಲ್ಲಿ ಮಲ್ಲಿಕಾರ್ಜುನ ಖನ್ನಾ,ಸೂರ್ಯಕಾಂತ ಅಜಾದಪೂರ ರವರು ಉಪಸ್ಥಿತರಿದ್ದರು.