ಶೋಷಿತ ಸಮಾಜವೆ ಜಾನಪದ ಸಾಹಿತ್ಯದ ತಾಯಿಬೇರು: ಶಂಭುಲಿಂಗ ವಾಲ್ದೊಡ್ಡಿ

ಬೀದರ:ಮಾ.28: ನಗರದ ಮಯೂರ ಬರೀದ ಶಾಹಿ ಹೋಟಲದಲ್ಲಿ ಚಿಗುರು ಸಾಮಾಜಿ ಹಾಗೂ ಸಾಂಸ್ಕøತಿಕ ಟ್ರಸ್ಟ ನಲ್ಲಿ ಕಾರ್ಯಕ್ರಮ ಜರುಗಿತ್ತು. ಉದ್ಘಾಟನೆ, ಖ್ಯಾತ ಜಾನಪದ ಚಿಂತಕ ಶಂಭುಲಿಂಗ ವಾಲ್ದೊಡ್ಡಿ ಮಾಡಿ ಮಾತನಾಡಿದರು.
ದರು.ಶೋಷಿತ ಸಮಾಜವೆ ಜಾನಪದ ಸಾಹಿತ್ಯದ ತಾಯಿ ಬೇರು ಆಗಿದಾರೆ. ನಮ್ಮ ಗ್ರಾಮಗಳಲ್ಲಿ ಜಾನಪದ ಸಾಹಿತ್ಯವನ್ನು ಶೋಷಿತ ಸಮುದಾಯದಲ್ಲಿ ಹುಟ್ಟಿರುವಂತಹದು ಮತ್ತು ಸಂಚಲಿತ ಸಮಾಜಕ್ಕೆ ಸ್ಥಿರ ಮೌಲ್ಯವಾಗಿರುವಂತಹದು, ಹಳ್ಳಿ ಜನರ ಜೀವನಾಡಿಯಾಗಿ, ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲಿ ಜಾನಪದ ಹಾಡುಗಳ ಸೊಡಗನ್ನು ಅನುದಿನ ಕಾಣಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸುಮಂತ ಕಟ್ಟಿಮನಿ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕಾ ಅಧ್ಯಕ್ಷ ಎಮ್ ಎಸ್ ಮನೊಹರ ಜಾನಪದ ಗಾಯಕರಾದ ಶಂಕರ ಚೊಂಡಿ, ವಿಜಯಕುಮಾರ ಸೋನಾರೆ, ಜಾನಪದ ಸಾಹಿತ್ಯ ಬಗ್ಗೆ ಉಪನ್ಯಾಸ ನೀಡಿ, ಜಾನಪದ ಹಾಡುಗಳನ್ನು ಹಾಡಿದರು. ಅಧ್ಯಕ್ಷತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನ ಸಂಚಾಲಕ ಮಾರುತಿ ಬೌದ್ಧೆ ವಹಿಸಿ, ಹೋರಾಟಗಳ ಗಂಡು ಧ್ವನಿ ಜಾನಪದ ಸಾಹಿತ್ಯವಾಗಿದೆ, ಜಾನಪದವನ್ನು ಮೈಗೂಡಿಸಿಕೊಂಡು ಜೀವನ ಸಾಗಿಸುತ್ತಿರುವವರಿಗೆ, ಸರ್ಕಾರಸ ಸೌಲಭ್ಯಗಳು ನೀಡುವಲ್ಲಿ ತಾರತಮ್ಯ ಮಾಡುತ್ತಿರವ ಸರ್ಕಾರದ ನೀತಿ ಬದಲಿಸಬೇಕು. ಮೂಲ ಜಾನಪದರಿಗೆ ಸೌಲಭ್ಯಗಳು ನೀಡಲು ಮುಂದಾಗಬೇಕು ಜಾನಪದ ಕಲಾವಿದರು ಹೋರಾಟ ಮಾಡಿ ತಮ್ಮ ಸೌಲಭ್ಯಗಳನ್ನು ತಾವು ಪಡೆದುಕೊಳ್ಳುಬೇಕು. ಜಾನಪದ ಸಾಹಿತ್ಯವನ್ನೆ ಬಂಡವಾಳ ಮಾಡಿಕೊಂಡು, ವರ್ಷ ವರ್ಷಕ್ಕೆ ಕೊಟಿಗಂಟಲೆ ಸರ್ಕಾರದಿಂದ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ನಿಜಾವಾದ ಜಾನಪದ ಕಲಾವಿದರಿಗೆ ಸಿಗುತ್ತಿಲ್ಲಾವೆಂದು ಕಳವಳ ವ್ಯಕ್ತಿಪಡಿಸಿದರು.
ಅತಿಥಿಗಳಾಗಿ ಅರುಣ ಪಟೇಲ, ರಾಜಕುಮಾರ ವಾಘಮಾರೆ, ಶಿವರಾಜ ಬಂಬಳಗಿ, ಮುಂತಾದವರು ವೇದಿಕೆ ಮೇಲೆ ಇದ್ದರು, ಸ್ವಾಗತ ವಿಶ್ವ ಕನ್ನಡಿಗರ ಸಂಸ್ಥೆ ರಾಜ್ಯಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ಟ್ರಸ್ಟನ ಅಧ್ಯಕ್ಷ ಶಿವರಾಜ ತಡಪ್ಪಳ್ಳಿ, ಕಾರ್ಯದರ್ಶಿ ಸಂಗೀತ ಎಸ್ ತಡಪಳ್ಳಿ, ರವರಿಗೆ ಸನ್ಮಾನಿಸಿದರು.
ಕಾರ್ಯಕ್ರಮದ ನಿರೂಪಣೆ ಮಹೇಶ ಗೋರನಾಳಕರ ಮಾಡಿದರು, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ ವತಿಯಿಂದ ಜಾನಪದ ಹಾಡುಗಳನ್ನು ಹಾಡಿದರು. ಮಹಿಳಾ ತಂಡಕ್ಕೆ ಸನ್ಮಾನಿಸಲಾಯಿತ್ತು. ಗೌತಮ ಮುಂತ್ತಗಿಕರ, ಗೌತಮ ಭೋಸ್ಲೆ, ಬಸವರಾಜ ಭಾವಿದೊಡ್ಡಿ, ಬಕ್ಕಪ್ಪಾ ರಾಜಗೀರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದರು.