ಶೋಷಿತ ಸಮಾಜಗಳಿಗೆ ಬೆಳಕು ಚೆಲ್ಲಿದ ಮಹಾನಾಯಕ

ಜಗಳೂರು. ಏ.೧೯; ವಿಶ್ವ ರತ್ನ ಮಹಾಮಾನವತಾವಾದಿ ಸಂವಿಧಾನ  ಶಿಲ್ಪಿ ಭಾರತರತ್ನ ಡಾ ಬಿ.ಆರ್ ಅಂಬೇಡ್ಕರ್ ರವರ 130 ನೇ ಜಯಂತಿಯನ್ನು ಬಿದರಿಕೆರೆ ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿನಿಲಯದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.ವಿದ್ಯಾರ್ಥಿನಿಲಯದ ವಾರ್ಡನ್ ಫಯಾಜ್ ಬಾಷಾ ಅವರು ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರಿಗೆ ಗೌರವ ಸಮರ್ಪಿಸಿದರು ನಂತರ ಮಾತನಾಡಿದ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮಜೀವಿತಾ
ವದಿಯಲ್ಲಿ ತಾನು ನೋವುಂಡು ದೇಶದ ಅಸಂಖ್ಯಾತ ಶೋಷಿತ ಸಮಾಜಗಳಿಗೆ ಬೆಳಕು ಚೆಲ್ಲಿದ ಮಹಾನಾಯಕ ಅಂಬೇಡ್ಕರ್ ರವರು ನಮಗೆ ಕೊಟ್ಟಂತಹ ಮೀಸಲಾತಿ ಬಿಕ್ಷೆಯಿಂದಲೇ ಇಂದು ನಾವೆಲ್ಲರು ಅದಿಕಾರ ಅನುಭವಿಸುವಂತಾಗಿದೆ ಅವರು ಸಂವಿದಾನ ರಚಿಸಿದ್ದರಿಂದ ಇಂದು ತುಳಿತಕ್ಕೆ ಒಳಗಾದ ಸಮಾಜಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು ಇಂತಹ ಯುಗ ಪುರುಷರನ್ನ ಒಂದು ಸಮಾಜಕ್ಕೆ ಸೀಮಿತ ಮಾಡದೆ ಪ್ರತಿಯೊಬ್ಬರು ಗೌರವಿಸಿ ಸ್ಮರಿಸಬೇಕು ಎಂದರು
ಈ ಸಂದರ್ಭದಲ್ಲಿ ಹಾಸ್ಟೆಲ್ ಸಿಬ್ಬಂದಿಗಳಾದ ಚನ್ನಬಸಪ್ಪ ಸಿದ್ದಮ್ಮನಹಳ್ಳಿ. ವೆಂಕಟೇಶ್. ವಿದ್ಯಾರ್ಥಿಗಳು ಸೇರಿದಂತೆ ಭಾಗವಹಿಸಿದ್ದರು