ಶೋಷಿತ ವರ್ಗದ ಧ್ವನಿಯಾಗಿದ್ದವರು ಅಂಬೇಡ್ಕರರು

ಕೆಂಭಾವಿ:ಎ,15:ಸಮಾಜದಲ್ಲಿ ಸ್ವಾತಂತ್ರ??, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದವರು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಎಂದು ಕೆಂಭಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂಗಣ್ಣ ತುಂಬಗಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ 132 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಜನರನ್ನೇ ಕೇಂದ್ರಬಿಂದುವಾಗಿಸಿಕೊಂಡು ಅವರ ಆಲೋಚನ ಕ್ರಮವನ್ನು ಅನುಸರಣೆ ಮಾಡಿಕೊಂಡು ಹೋರಾಟದ ಹೆಜ್ಜೆಯಿಟ್ಟಿದ್ದರು. ಎಲ್ಲಾ ಧರ್ಮ, ಜಾತಿ-ಜನಾಂಗದವರಿಗೆ ಸಮಾನವಾಗಿ ಉದ್ಯೋಗ, ಹಕ್ಕುಗಳು ಸೇರಿದಂತೆ ಮೀಸಲಾತಿ ಸೌಲಭ್ಯಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸರೆಡ್ಡಿ ಯಾಳಗಿ, ಶಿವಪ್ಪ ಕಂಬಾರ, ಶರಣಪ್ಪ ಯಾಳಗಿ, ಮಲ್ಲಿನಾಥಗೌಡ ಪಾಟೀಲ, ಶಂಕರ ಕರಣಗಿ, ಅಯ್ಯಣ್ಣ ಮಾಳಳ್ಳಿಕರ್, ರಮೇಶ ಕೊಡಗಾನೂರ, ಉಮೇಶರೆಡ್ಡಿ, ಹಳ್ಳೆಪ್ಪ ಕವಲ್ದಾರ, ದೇವು ಯಾಳಗಿ, ಮಲ್ಲು ವಠಾರ, ಹನೀಫ್ ಕೊಕರ್, ಮಡಿವಾಳಪ್ಪ ಬಳಬಟ್ಟಿ, ಹರಿಶ್ವಂದ್ರಪ್ಪ ಕಟ್ಟಿಮನಿ, ಗುರಪ್ಪ ಮಾಳಳ್ಳಿಕರ್, ಜಟ್ಟೆಪ್ಪ ಮುಷ್ಠಳ್ಳಿ, ಪರಶುರಾಮ, ಯಮನೂರ, ಸೂಗಪ್ಪ ನಗನೂರ, ಸಿದ್ದಾರ್ಥ ಸೇರಿದಂತೆ ಅನೇಕರಿದ್ದರು.