ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು:ಗರಿಮಾ ಪಂವಾರ

ಕಲಬುರಗಿ, ಮಾ.14: ಸಮಾಜದಲ್ಲಿ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು. ಅದನ್ನು ಬಿಟ್ಟು ಹೆಣ್ಣನ್ನು ದ್ವೇಷದಿಂದ, ಕೀಳಿರಿಮೆಯಿಂದ ಕಾಣಬಾರದು ಎಂದು ಹೇಳುತ್ತಾ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಗರಿಮಾ ಪಂವಾರ ಹೇಳಿದರು.
ಮಂಗಳವಾರದಂದು ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಹಿಳಾ ಕಾನೂನು ಅರಿವು ಮತ್ತು ಮಹಿಳಾ ಸಾದಕೀಯರಿಗೆ ಸನ್ಮಾನ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣಿಗೆ ಸಮಾನವಾದ ಸ್ಥಾನಮಾನ ಮತ್ತು ಗೌರವ ಸಿಗಬೇಕು. ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮತ್ತು ಗೌರವ ಸಿಗುವಂತೆ ಮಾಡಬೇಕು. ಕುಟುಂಬ,ಸಮಾಜ,ಮತ್ತು ಎಲ್ಲಾ ರೀತಿಯಲ್ಲಿ ಚ್ಯುತಿ ಬರದ ಹಾಗೆ ನೋಡಿಕೊಳ್ಳುವ ಶಕ್ತಿ ಹೆಣ್ಣಿಗೆ ಇದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಕಲಬುರಗಿ ಶ್ರೀ ಸುಶಾಂತ್ ಎಮ್ ಚೌಗಲೆ ಮಾತನಾಡಿದರು.
ಸಮಾಜದಲ್ಲಿ ಮಹಿಳೆಯ ಪಾತ್ರ ದೊಡ್ಡದು. ಹೆಣ್ಣು ಸಬಲೆಯಲ್ಲ ಅಬಲೆಯಾಗಬೇಕು. ಸಮಾಜದಲ್ಲಿ ಹೆಣ್ಣಿಗೆ ಗೌರವಯುತ ಸ್ಥಾನಮಾನವನ್ನು ಕಲ್ಪಿಸಿಕೊಡಬೇಕು. ಎಂದರು.
ಒಂದು ಹೆಣ್ಣನ್ನು ಶಿಕ್ಷಣ ವಂಚಿತಳನ್ನಾಗಿ ಮಾಡಬೇಡಿ ಬದಲಾಗಿ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದರು. ಶಿಕ್ಷಣ ಮತ್ತು ಆರೋಗ್ಯ ಎರಡೂ ಕೂಡ ಸರಿಯಾಗಿ ಇದ್ದರೆ ನಮ್ಮ ದೇಶ ಸುಧಾರಿಸುತ್ತದೆ ಎಂದರು.
ಅಪರ ಪ್ರಾದೇಶಿಕ ಆಯುಕ್ತರು,ಕಲಬುರಗಿ ವಿಭಾಗ,ಕಲಬುರಗಿ ಶ್ರೀಮತಿ. ಪ್ರಮೀಳಾ ಎಂ.ಕೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡುತ್ತಾ, ಪುರಾತನ ಕಾಲದಿಂದಲೂ ಹೆಣ್ಣಿಗೆ ಗೌರವನ್ನು ಕೊಡುತ್ತಾ ಬಂದಿದ್ದೇವೆ, ಮುಂದೆಯು ಕೂಡ ಹೆಣ್ಣಿಗೆ ಗೌರವ ಕೊಡುವುದು ಕ್ಷಿಣಿಸಿ ಹೋಗಬಾರದು ಎಂದರು. ಹೆಣ್ಣಿಗೆ ಸಮಾನವಾದ ಸ್ಥಾನಮಾನಗಳು ಕಲ್ಪಿಸಿ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಪೋಲೀಸ್ ಆಯುಕ್ತರು ಕಲಬುರಗಿ ನಗರ ಚೇತನ್ ಆರ್, ಕಲಬುರಗಿ ಉಪವಿಭಾಗ ಸಹಾಯಕ ಆಯುಕ್ತೆ ಮಮತಾ ಕುಮಾರಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಜಂಟಿ ನಿರ್ದೇಶಕರು, ಶ್ರೀಮತಿ. ಪ್ರವೀಣ ಪ್ರಿಯಾ ಡೇವಿಡ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ಘಟಕ, ಕಲಬುರಗಿ ಶ್ರೀಮತಿ. ಮಂಜುಳಾ ಪಾಟೀಲ್ ಉಪಸ್ಥಿತರಿದ್ದರು.