ಶೋಷಿತ ಜನಾಂಗದ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯ,, ಪರಣ್ಣ ಮುನವಳ್ಳಿ

ಗಂಗಾವತಿ ಡಿ 01 : ಸಮಾಜದಲ್ಲಿನ ಶೋಷಿತವರ್ಗಗಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅವಶ್ಯವಾಗಿದ್ದು ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು ಅವರು ಮಂಗಳವಾರದಂದು ಗಾಂಧಿನಗರದ ಶ್ರೀ ಆದಿಜಾಂಬವ ವೃತ್ತವನ್ನು ಉದ್ಘಾಟಿಸಿ ಮಾತನಾಡಿದರು, ಜಾಂಭವ ಎಂಬ ಹೆಸರನ್ನು ಕೇಳಿದಾಗ ದ್ವಾಪರ ಯುಗ ನೆನಪಾಗುವುದು ಆದಿ ಜಾಂಬವಂತ ಅತ್ಯಂತ ಶಕ್ತಿಶಾಲಿಯಾಗಿದೆ ಇತಿಹಾಸ ಈಗ ಜಾಂಬವ ಸಮಾಜಬಾಂಧವರು ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ವಿವಿಧ ಕ್ಷೇತ್ರದಲ್ಲಿ ತೀರ ಹಿಂದುಳಿದ ಜನಾಂಗವಾಗಿದ್ದು ಸಮಾಜಮುಖಿಯಾಗಿ ಮುಂದುವರಿಯಲು ಶಿಕ್ಷಣ ಅವಶ್ಯವಾಗಿದೆ ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವುದು ಮೂಲಕ ಸಮಾಜದ ನಾನಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀನಾಥ್ ಮಾತನಾಡಿ ಸಮಾಜದ ಅಭಿವೃದ್ಧಿಗೆ ತಮ್ಮ ಮಕ್ಕಳನ್ನು ಗುಣಮಟ್ಟದ ಸಂಸ್ಕಾರವನ್ನು ಕಲಿಸಿ ಶಿಕ್ಷಣದ ಮೂಲಕ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಂತೆ ತಿಳಿಸಿದರು ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ. ಮಾಜಿ ಎಮ್ ಎಲ್ಸಿ ಹೆಚ್.ಆರ್.ಶ್ರೀನಾಥ.ಮಾಜಿ ಜಿಪಂ ಸದಸ್ಯರಾದ ಸಿದ್ದರಾಮಸ್ವಾಮಿ. ಮುಖಂಡರಾದ ಜೋಗದ್ ನಾರಾಯಣಪ್ಪ.ಯು ಲಕ್ಷ್ಮಣ. ಮೌನೇಶ ದಡಸ್ಕೂರು.ಮುದೇಯಪ್ಪ ಪೂಜಾರ.ಸೋಮನಾಥ ಕಂಪ್ಲಿ.ಹುಸೇನಪ್ಪ ಸ್ವಾಮಿ.ಸಂಗಮೇಶ.ಸೇರಿವೆ ಇತರರು ಇದ್ದರು

Attachments area