ಶೋಷಿತ ಜನಾಂಗಗಳಿಗೆ ಆರಾಧ್ಯ ದೈವ ಡಾ. ಅಂಬೇಡ್ಕರ್: ಡಾ.ಶರಣಪ್ಪ ಮಾಳಗಿ

ಕಲಬುರಗಿ, ಎ,12: ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಶ್ವಾರ್ಥವಾಗಿ ಹಗಲಿರುಳು ಶ್ರಮಿಸಿದ ಮಹಾನ ಮಾನವತಾದಿ ಎಂದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಮಹಾಗಾಂವ ಕ್ರಾಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶರಣಪ್ಪ ಮಾಳಗಿ ಹೇಳಿದರು.

ಮಂಗಳವಾರ ಮಹಾಗಾಂವ ಕ್ರಾಸ್ ನಲ್ಕಿರುವ ಚಾಣುಕ್ಯ ಪ್ರಾಥಮಿಕ ಶಾಲೆ ಹಾಗೂ ನವೋದಯ ತರಬೇತಿ ಕೇಂದ್ರದಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಮತ್ತು ಚಾಣುಕ್ಯ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 132 ನೇ ಜಯಂತಿ ನಿಮಿತ್ತ ಹಮ್ಮಿಕೊಂಡ ಭಾರತ ಬೆಳಗಿದ ಬಾಬಾ ಸಾಹೇಬ್ ವಿಶೇಷ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು ಅವರು ಅಭ್ಯಾಸಕ್ಕೆ ಕುಳಿತರೆ ಹಗಲು ರಾತ್ರಿ ಎನ್ನುವುದೆ ಅರಿಯದ ರೀತಿಯಲ್ಲಿ ಮಗ್ನರಾಗಿ ಓದುತ್ತಿದ್ದರು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಅಬ್ಯಾಸ ಮಾಡಿದರೆ ಗುರಿ ಸಾಧನೆ ಸಾಧ್ಯ ,
ಜೀವನದುದ್ದಕ್ಕೂ ಹೋರಾಟವನ್ನೆ ಉಸಿರಾಗಿಸಕೊಂಡಿದ್ದರು, ಜೀವನದಲ್ಲಿ ಯಶಸ್ವಿಯಾಗಬೆಕೆಂದರೆ ಶಿಕ್ಷಣ, ಸಂಘಟನೆ, ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಲೇಂಗಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಬಾಲ್ಯದಲ್ಲಿ ಹಲವಾರು ಅಪಮಾನಗಳನ್ನು ಎದುರಿಸಿದರು ಎದೆಗುಂದದೆ ಮುನ್ನುಗ್ಗಿ ಅಂದಿನ ಕಾಲದಲ್ಲಿ ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಜನತೆಯ ಬಾಳಿನಲ್ಲಿದ್ದ ಅಂಧಕಾರವನ್ನು ಕಿತ್ತೆಸೆದು ಸಂವಿಧಾನದ ಅಡಿಯಲ್ಲಿ ಅವರೆಲ್ಲರ ಬಾಳಲ್ಲಿ ಜ್ಯೋತಿಯನ್ನು ಬೆಳಗಿಸಿದ ಮಹಾನ್ ನೇತಾರರೆಂದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತ್ರ, ಅವರ ತತ್ವಾದರ್ಶಗಳನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳೊಣ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪೆÇ್ರ.ಯಶವಂರಾಯ ಅಷ್ಟಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕಸಾಪ ಜಿಲ್ಲಾ ಘಟಕದ ಪದಾಧಿಕಾರಿ ರಾಜೇಂದ್ರ ಮಾಡಬೂಳ , ಕಾಳಗಿ ಕಸಾಪ ತಾಲೂಕು ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಮಹಾಗಾಂವ ಕ್ರಾಸ್ ಚಾಣುಕ್ಯ ಪೆÇಲೀಸ್ ಸಿಬ್ಬಂದಿ ಗಂಗಾಧರ, ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಿದ್ದರಾಜ ಲೇಂಗಟಿ, ಎಎಸ್ ಐ ಗಂಗಾಧರ, ರೇವಣಸಿದ್ದಪ್ಪ ಮುಕರಂಬಿ, ವರದಿಗಾರ ಸುಧಾಕರ ಲೇಂಗಟಿ, ವಿಠಲರಾವ ಮುಕರಂಬಿ ಇತರರು ಇದ್ದರು

ಮಲ್ಲಿನಾಥ ಅಂಬಲಗಿ ಸ್ವಾಗತಿಸಿದರು, ಸುವರ್ಣಾ ಪೆÇದ್ದಾರ ಪ್ರಾರ್ಥಿಸಿದರು, ಮಹಾಗಾಂವ ಕಸಾಪ ವಲಯ ಘಟಕದ ಅಧ್ಯಕ್ಷ ಅಂಬಾರಾಯ ಮಡ್ಡೆ ನಿರೂಪಿಸಿದರು, ಕಮಲಾಪುರ ಕಸಾಪ ಗೌರವ ಕಾರ್ಯದರ್ಶಿ ರವಿಂದ್ರ ಬಿಕೆ ವಂದಿಸಿದರು,

ನಿವೃತ್ತ ಶಿಕ್ಷಕ ವೀರಭದ್ರಪ್ಪ ಪಸಾರ, ಮಾಜಿ ತಾಪಂ ಸದಸ್ಯ ಅಮೃತ ಗೌರೆ, ಪ್ರಗತಿಪರ ರೈತ ಮಹಿಳೆ ಕವಿತಾಬಾಯಿ ಚಂದ್ರಕಾಂತ, ಗಾಯಕಿ ಸುವರ್ಣಾ ಪೆÇದ್ದಾರ ಅವರುಗಳಿಗೆ ವಿಶೇಷ ವಾಗಿ ಸತ್ಕರಿಸಿ ಪೆÇ್ರೀತ್ಸಾಹಿಸಲಾಯಿತು. ಕಮಲಾಪುರ ಕಸಾಪ ಪದಾಧಿಕಾರಿ ಸಂಜುಕುಮಾರ ನಾಟೀಕಾರ,
ರತ್ನಮ್ಮ ಬಿರಾದರ, ಪಲ್ಲವಿ ಕಟ್ಟೋಳಿ ಇತರರು ಇದ್ದರು.