ಶೋಷಿತ ಜನರ ವಿಮುಕ್ತಿಗೆ ರಷ್ಯಾದ ಮಹಾಕ್ರಾಂತಿ ಸ್ಫೂರ್ತಿ

ಶಹಾಬಾದ:ನ.21: ಜಾಗತಿಕವಾಗಿ ಸಾಮ್ರಾಜ್ಯಶಾಹಿಗಳು ಹಾಗೂ ಬಂಡವಾಳಶಾಹಿಗಳು ಇಡೀ ಮನುಕುಲಕ್ಕೆ ಸೇರಿದ ಸಂಪನ್ಮೂಲಗಳನ್ನು ಹಾಗೂ ಜನಸಾಮಾನ್ಯರ ಶ್ರಮವನ್ನು ಲೂಟಿ ಮಾಡುತ್ತಿದ್ದಾರೆ. ಇದು ಪರಿಸರದ ಅಸಮತೋಲನೆಗೆ ಹಾಗೂ ಜನರ ಶೋಷಣೆಗೆ ಕಾರಣವಾಗಿದ್ದು ಇವರ ವಿರುದ್ಧ ಶೋಷಿತ ಕಾರ್ಮಿಕ ಹಾಗೂ ರೈತ ವರ್ಗದವರು ಸಂಘಟಿತ ಹೋರಾಟ ಮಾಡಬೇಕಾಗಿದೆ. ಈ ಹೋರಾಟಕ್ಕೆ ರಷ್ಯಾದ ಮಹಾಕ್ರಾಂತಿಯು ನಮಗೆ ಸ್ಫೂರ್ತಿಯಾಗಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷದ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ಗಣಪತರಾವ.ಕೆ .ಮಾನೆ ಅವರು ಹೇಳಿದರು.

ಅವರು ಗುರುವಾರ ನಗರದ ಬಸವೇಶ್ವರ ವೃತ್ತದಲ್ಲಿ ಎಸ್.ಯು.ಸಿ.ಐ (ಐ) ಪಕ್ಷದ ವತಿಯಿಂದ ಸಂಘಟಿssಸಲಾದ ರಷ್ಯಾದ ನವೆಂಬರ್ ಕ್ರಾಂತಿಯ 105ನೇ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಪಂಚದಲ್ಲಿಯೇ ರೋಗಗ್ರಸ್ಥವಾದ ದೇಶ ರಷ್ಯಾದಲ್ಲಿ ಕಾಮ್ರೇಡ್ ಲೆನಿನ್ ರವರು ಶೋಷಿತ ಕಾರ್ಮಿಕರನ್ನು ಕಮ್ಯೂನಿಸ್ಟ್ ವಿಚಾರಧಾರೆಯ ಆಧಾರದ ಮೇಲೆ ಸಂಘಟಿಸಿ ಕ್ರೂರ ಝಾರ್ ದೊರೆಗಳ ವಿರುದ್ಧ ಹೋರಾಟಗಳನ್ನು ಬೆಳೆಸಿ, 1917ರ ನವೆಂಬರನಲ್ಲಿ ಸಮಾಜವಾದಿ ಕ್ರಾಂತಿ ನೇರವೆರಿಸಿದರು. ಕ್ರಾಂತಿಯ ನಂತರ ಯು.ಎಸ್.ಎಸ್.ಆರ್ ಆದ ರಷ್ಯಾ ದೇಶವನ್ನು ಮುನ್ನಡೆಸಿದ ಲೆನಿನ್ ಹಾಗೂ ಸ್ಟಾಲಿನ್ ರವರು ಸಮಾಜವಾದಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಗೊಳಿಸಿದರು. ಬಡತನ, ನಿರುದ್ಯೋಗ, ಬೆಲೆಏರಿಕೆ, ಅನಕ್ಷರತೆ, ವೈಶ್ಯವಾಟಿಕೆಯಂತಹ ಹಲವು ಸಮಸ್ಯೆಗಳನ್ನು ಬುಡಸಮೇತ ಕಿತ್ತುಹಾಕಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದ್ದರು. ಭಾರತದಲ್ಲಿ ಅಂತಹ ಸಮಾನತೆಯ ಸಮಾಜದ ಕನಸು ಕಂಡಿದ್ದ ಭಗತಸಿಂಗ್, ನೇತಾಜಿ ಸುಭಾಷಚಂದ್ರಬೋಸರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ದೇಶವನ್ನು ಇಲ್ಲಿಯವರೆಗೆ ಆಳ್ವಿಕೆ ಮಾಡಿರುವ ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳಿಗೆ ಸೇವೆ ಸಲ್ಲಿಸುತ್ತಿರುವುದರಿಂದ, ಜನಸಾಮಾನ್ಯರ ಸಮಸ್ಯೆಗಳು ಹಾಗಿಯೇ ಉಳಿದಿವೆ ಎಂದು ಹೇಳುತ್ತಾ ಜನಾಂದೋಲದ ಮೂಲಕ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾನತೆಯ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲು ಮುಂದೆ ಬರಬೇಕೆಂದು ಕರೆ ನೀಡಿದರು.

ಎಸ್.ಯು.ಸಿ.ಐ (ಸಿ) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಕಾಮ್ರೇಡ್ ರಾಮಣ್ನ ಎಸ್.ಇಬ್ರಾಹಿಂಪುರ,ಸ್ಥಳೀಯ ಸಮಿತಿಯ ಸದಸ್ಯ ಕಾಮ್ರೇಡ್ ರಾಘವೇಂದ್ರ ಎಮ್.ಜಿ ಮಾತನಾಡಿದರು.

ಕಾಮ್ರೇಡ್ ಜಗನ್ನಾಥ ಎಸ್.ಎಚ್, ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ್, ಸಿದ್ದು ಚೌದರಿ. ತುಳಜರಾಮ .ಎನ್. ಕೆ, ರಮೇಶ ದೇವಕರ. ನೀಲಕಂಠ ಎಮ್ ಹುಲಿ. ತಿಮ್ಮಣ್ಣ ಮಾನೆ. ಶಿವುಕುಮಾರ ಕುಸಾಳೆ, ಮಹಾದೇವಿ ಆತ್ನೂರ, ಅಂಭಿಕಾ ಗುರಜಾಲಕರ್, ರಾಧಿಕಾ ಚೌದರಿ. ಸುಕನ್ಯಾ. ರಘು ಪವಾರ. ಶ್ರೀನಿವಾಸ. ಆನಂದ, ಭಾಬು, ಕಿರಣ ಮಾನೆ, , ಅಜಯ ಗುರಜಾಲಕರ್. ಬಾಬು. ಸುರೇಶ ಸೇರಿ ಹಲವಾರು ಜನ ಭಾಗವಹಿಸಿದ್ದರು.