`ಶೋಷಿತೆ’ ಬಿಡುಗಡೆಗೆ ಸಜ್ಜು

ನಟಿ ನಿರೂಪಕಿ  ಡಾ. ಜಾನ್ವಿ ರಾಯಲ ನಾಯಕಿಯಾಗಿ ಕಾಣಿಸಿಕೊಂಡಿರುವ “ಶೋಷಿತೆ” ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಪ್ರತಿ ಐದು ಮಹಿಳೆಯರಲ್ಲಿ ಒಬ್ಬರು ಗರ್ಭಧಾರಣೆಗೆ ಸಂಬಂಧಿಸಿದ ಸವಾಲು ಎದುರಿಸುತ್ತಾರೆ. ಇಂತಹ ವಿಷಯ ಮುಂದಿಟ್ಟುಕೊಂಡು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಶಶಿಧರ್ ಆಕ್ಷನ್ ಕಟ್ ಹೇಳಿದ್ದಾರೆ.

ರೂಪರಾಯಪ್ಪ ವೆಂಕ್ಷ, ಪ್ರಶಾಂತ್, ದರ್ಶನ್ ಹಾಗೂ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸದೆ ‘ಯು’ ಪ್ರಮಾಣಪತ್ರ ನೀಡಿದೆ

2015ರಲ್ಲಿ ನಡೆದ ಘಟನೆಯ ಎಳೆ ಮುಂದಿಟ್ಟುಕೊಂಡು  ಕಥೆ ಮಾಡಲಾಗಿದೆ.  ನೊಂದ ಮಹಿಳೆಯ ಅಡೆತಡೆಗಳನ್ನು ನಿವಾರಿಸಲು, ಆಕೆಗೆ ಅಗತ್ಯ ಭಾವನಾತ್ಮಕ ಬೆಂಬಲನೀಡುವ ಬದಲು, ಸ್ವಂತ ಕುಟುಂಬದ ಸದಸ್ಯರು ಅವಳಿಗೆ ತೊಂದರೆಗೊಳಿಸುತ್ತಾರೆ ಎನ್ನುವುದು ಚಿತ್ರದ ತಿರುಳು ಕೆವಿನ್.ಎಂ. ಸಂಗೀತ, ರವಿವರ್ಮ.ಕೆ ಛಾಯಾಗ್ರಃಣವಿದೆ. ಬೆಂಗಳೂರು, ಹೊಸಕೋಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.