ಶೋಷಿತರ ಪರನಿಂತ ಕಾರ್ಮಿಕ

ದಾವಣಗೆರೆ.ಸೆ.೬: ಶೋಷಿತರ ಪರನಿಂತ ಕಾರ್ಮಿಕರಲ್ಲಿ ರಾಜೇಂದ್ರ ಬಂಗೇರ ಒಬ್ಬರು ಎಂದು ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಬಣ್ಣಿಸಿದರು.ಅವರು ಬಾಡಾ ಕ್ರಾಸ್‌ನಲ್ಲಿರುವ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಎನ್. ರಾಜೇಂದ್ರ ಬಂಗೇರ ಅವರ ಹುಟ್ಟ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಪರ ಹೋರಾಟ, ಕಾರ್ಮಿಕರ ಹೋರಾಟ, ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನಕ್ಕಾಗಿ ಹೋರಾಟಗಳಲ್ಲಿ ಯಾವಾಗಲೂ ಮುಂಚಿಣಿಯಲ್ಲಿ ಬಂಗೇರ ಇರುತ್ತಾರೆ. ಕರ್ನಾಟಕ ಅಸಂಘಟಿತ ಮುದ್ರಣ ಕಾರ್ಮಿಕ ಸಂಘವನ್ನು ಸ್ಥಾಪಿಸಿ ಮುದ್ರಣ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವಲ್ಲಿ ನಿರಂತರ ಹೋರಾಟ ಮಾಡುತ್ತಿರುವ ಇವರು ತಮ್ಮ ಹುಟ್ಟು ಹಬ್ಬವನ್ನು ಈ ಅಂಧ ಮಕ್ಕಳ ಜೊತೆಯಲ್ಲಿ ಆಚರಿಸಿಕೊಳ್ಳತ್ತಿರುವುದು ಅವರ ಸರಳತೆಯನ್ನು ತೋರಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಅಂಧ ಮಕ್ಕಳ ಶಾಲೆಯ ಶಿವಮೂರ್ತಿಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ಧೀನ್, ಬೆಂಕಿನುಡಿ ಪತ್ರಿಕೆಯ ಫೈರೋಜ್‌ಖಾನ್, ಎಸ್.ಎಸ್. ರಾಜು, ಶಿವಕುಮಾರಸ್ವಾಮಿ,ನಾಗರಾಜ್ ಮತ್ತಿತರರಿದ್ದರು.