ಶೋಷಿತರ ಏಳಿಗೆಗೆ ಶ್ರಮಿಸಲು ಮನವಿ

ಕೆ.ಆರ್.ಪುರ,ಆ.೫- ಬಡವರ ಶೋಷಿತರ ಧ್ವನಿಯಾಗಿ ರಾಜಕಾರಣಿಗಳು ಶ್ರಮಿಸಬೇಕೆಂದು ಸಾಹಿತಿ ಡಾ.ಬನಂದೂರು ಕೆಂಪಯ್ಯ ಅವರು ಹೇಳಿದರು.ಮಹದೇವಪುರದ ಕ್ಷೇತ್ರದ ಮುನ್ನೆಕೊಳಲು ವಾರ್ಡಿನ ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.ರಾಜಕಾರಣಿಗಳು ಜನಾನುರಾಗಿ ಬಡವರ ಸರ್ವತೋಮುಖ ಪ್ರಗತಿಗೆ ಬೆನ್ನೆಲುಬಾಗಿ ನಿಲ್ಲುವಂತೆ ಮನವಿ ಮಾಡಿದರು.ಮಾಜಿ ಪಾಲಿಕೆ ಸದಸ್ಯ ಉದಯಕುಮಾರ್ ಅವರು ಕ್ಷೇತ್ರದಲ್ಲಿ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆ ಜನತೆಗೆ ಸೇವೆ ಸಲ್ಲಿಸುವಂತೆ ತಾಗಲಿ ಆಶಿರ್ವಾದಿಸಿದರು.
ಮಾಜಿ ಪಾಲಿಕೆ ಸದಸ್ಯ ಉದಯಕುಮಾರ್ ಮಾತನಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ವಾರ್ಡ್ ಸಮಸ್ಯೆಗಳ ಬಗ್ಗೆ ಪಟ್ಟಿ ಸಿದ್ದಪಡಿಸಲಾಗಿದ್ದು ಸಮಸ್ಯೆಗಳನ್ನು ಪರಿಹರಿಸುವ ಮೂಲಕ ವಾರ್ಡ್ ನ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಹದೇವಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಟಿಬಿ ಬಾಬು, ಪಣತ್ತೂರು ಬಾಬುರೆಡ್ಡಿ, ಮಾಜಿ ಅಧ್ಯಕ್ಷ ಜಯರಾಂ ರೆಡ್ಡಿ, ರಾಮಕೃಷ್ಣಪ್ಪ, ಎಂಸಿಸಿ ರವಿ, ಕವಿತಾ ರೆಡ್ಡಿ ಇದ್ದರು.