ಶೋಷಿತರನ್ನು ಸಬಲರನ್ನಾಗಿ ಮಾಡಿದ ಡಾ.ಅಂಬೇಡ್ಕರ್ ಯುವಕರಿಗೆ ಮಾದರಿ:ಪ್ರೊ. ತಳವಾರ ಸಾಬಣ್ಣ

ವಿಜಯಪುರ, ಎ.17-ಶೋಷಿತ ಸಮುದಾಯವನ್ನ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಹೋರಾಡಿದ ಅಂಬೇಡ್ಕರ್ ಅವರು ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಶಿಕ್ಷಣ ತಜ್ಞ ಪ್ರೊ. ತಳವಾರ ಸಾಬಣ್ಣ ಹೇಳಿದರು.
ಅವರು ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಘಟಕದ ಸಹಯೋಗದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಸಮಗ್ರತೆ, ಸ್ವಾತಂತ್ರ್ಯ, ಸಮಾನತೆ, ಆರ್ಥಿಕತೆಯಲ್ಲಿಕೃಷಿಯ ಮಹತ್ವ, ನೀರಾವರಿ, ನದಿ ಜೋಡಣೆ, ಸಾಮಾಜಿಕ ಸುಭದ್ರತೆ, ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೆ ಆದ ಕೊಡುಗೆ ನೀಡಿರುವ ಅಂಬೇಡ್ಕರ್ ಅವರು, ಮೊದಲಿನಿಂದಲೂ ಸಮಾಜದ ಎಲ್ಲ ಅವಮಾನಗಳನ್ನು ಮೆಟ್ಟಿ ನಿಂತು ಸಾಧಕರಾಗಿ ಹೊರಹೊಮ್ಮಿದ್ದರು. ಅವರಂತೆಯೇ ಮುಂಬರುವ ಯುವಜನತೆ ಸಾಧಕರಾಗಬೇಕು ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು, ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳು ದೊರಕುವ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ತುಳಸಿಮಾ¯ ಮಾತನಾಡಿ, ಯಾವುದೇ ಒಂದು ಚೌಕಟ್ಟಿಗೆ ಅಂಬೇಡ್ಕರ್ ಅವರನ್ನು ಸೀಮಿತಗೊಳಿಸದೇ, ಅವರನ್ನು ಒಬ್ಬರಾಷ್ಟ್ರಾಭಿಮಾನಿಯನ್ನಾಗಿ, ಚಿಂತಕರನ್ನಾಗಿ ನೋಡಬೇಕು. ಅವರ ಕುರಿತು ಸಮಗ್ರಚಿಂತನೆಯನ್ನು ಮಾಡಿದಾಗ ಮಾತ್ರ ಅವರ ವಿಚಾರಧಾರೆಗಳ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್.ಕೆ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಬುದ್ಧ ವಂದನೆ ಮಾಡಿದರು.ಡಾ.ಬಿ.ಆರ್.ಅಂಬೇಡ್ಕರ್‍ಅಧ್ಯಯನಕೇಂದ್ರದ ನಿರ್ದೇಶಕಡಾ.ವೆಂಕೋಬ ನಾರಾಯಣಪ್ಪ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಬಿ.ಆರ್.ಅಂಬೇಡ್ಕರ್‍ಅಧ್ಯಯನಕೇಂದ್ರದ ಸಹಾಯಕ ನಿರ್ದೇಶಕಡಾ.ಸುರೇಶ.ಕೆ.ಪಿ. ಅತಿಥಿಗಳನ್ನು ಪರಿಚಯಿಸಿದರು.ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಘಟಕದ ನಿರ್ದೇಶಕಿಡಾ.ಅನೀತಾ ನಾಟೆಕರ್ ವಂದಿಸಿದರು.ಡಾ.ಹನುಮಂತಯ್ಯ ಪೂಜಾರಿಕಾರ್ಯಕ್ರಮವನ್ನು ನಿರೂಪಿಸಿದರು.