ಶೋರಾಪೂರ ವಿಧಾನಸಭಾ ಉಪಚುನಾವಣೆ ಒಟ್ಟು ಶೇಕಡವಾರು 76.04 ರಷ್ಟು ಮತದಾನ

ಯಾದಗಿರಿ : ಮೇ 08 : ಶೋರಾಪುರ ವಿಧಾನಸಭಾ ಉಪ ಚುನಾವಣೆ ಮತದಾನವು ಜಿಲ್ಲೆಯಾದ್ಯಂತ ಮೇ 7 ರಂದು ಮಂಗಳವಾರ ಬಿರುಸಿನಿಂದ ನಡೆದಿದ್ದು ಒಟ್ಟು ಶೇಕಡವಾರು 76.04 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

 ಸುರಪುರ ಕ್ಷೇತ್ರದಲ್ಲಿ 142532 ಪುರುಷ ಮತದಾರರು, 140523 ಮಹಿಳಾ ಮತದಾರರು, 28 ಇತರೆ ಮತದಾರರು ಸೇರಿದಂತೆ ಒಟ್ಟು 283083 ಮತದಾರರು ಇದ್ದಾರೆ.
 ಇದರಲ್ಲಿ ಒಟ್ಟು ಪುರುಷ ಮತದಾರರು 109995, ಮಹಿಳಾ ಮತದಾರರು 105270, ಇತರೆ 3 ಸೇರಿದಂತೆ ಒಟ್ಟು 215268 ಮತಗಳು ಚಲಾವಣೆಯಾಗಿದ್ದು, ಶೇಕಡವಾರು 76.04 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.