ಶೋಯೆಬ್ ಮಲ್ಲಿಕ್ ಕಾರು ಅಪಘಾತ ಪ್ರಾಣಾಪಯದಿಂದ ಪಾರು

ಲಾಹೋರ್, ಜ 11-ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೋಯಬ್ ಮಲಿಕ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಮಲಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

2021ರ ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಇನ್ನು ಕ್ರಿಕೆಟ್ ಮಂಡಳಿಯ ರಾಷ್ಟ್ರೀಯ ಉನ್ನತ ಕಾರ್ಯಕ್ಷಮತೆ ಕೇಂದ್ರದಿಂದ ವಾಪಸ್ಸಾಗುತ್ತಿದ್ದಾಗ ಕಾರು ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಶೋಯಬ್ ಮಲಿಕ್ ತಮ್ಮ ಸ್ಫೋಟ್ಸ್ ಕಾರನ್ನು ವೇಗವಾಗಿ ಓಡಿಸಿಕೊಂಡು ಬರುತ್ತಿದ್ದು ನಿಯಂತ್ರಣ ತಪ್ಪಿ ಟ್ರಕ್ ವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ