ಶೋಯೆಬ್ ಮಲಿಕ್ ರಿಂದ ವಿಚ್ಛೇದನ ಪಡೆದ ಸಾನಿಯಾ ಮಿರ್ಜಾರ ಇಷ್ಟದ ನಟ ಯಾರು ಗೊತ್ತೇ?ಅವರೇ ಅಕ್ಷಯ್ ಕುಮಾರ್

’ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಇತ್ತೀಚಿನ ಸಂಚಿಕೆಯಲ್ಲಿ, ಸಾನಿಯಾ ಮಿರ್ಜಾ ಅವರ ಉತ್ತರವು ಎಲ್ಲರ ಗಮನ ಸೆಳೆಯಿತು. ಕಪಿಲ್ ಶರ್ಮಾ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ವಿವಾಹಿತ ನಟನ ಹೆಸರು ಟೆನಿಸ್ ತಾರೆಯ ಬಾಯಿಂದ ಹೊರಬಿತ್ತು.
ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನದಿಂದಲೂ ಈ ಸಮಯ ಸುದ್ದಿಯಲ್ಲಿದ್ದಾರೆ. ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನದ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಶೋಯೆಬ್ ಈಗ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದಾರೆ ಮತ್ತು ಪಾಕಿಸ್ತಾನಿ ನಟಿ ಸನಾ ಜಾವೇದ್ ರನ್ನು ವಿವಾಹವಾಗಿದ್ದಾರೆ. ಅದೇ ಸಮಯದಲ್ಲಿ ಶೋಯೆಬ್‌ನಿಂದ ವಿಚ್ಛೇದನದ ನಂತರ, ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ.


ಅವರು ಸೈನಾ ನೆಹ್ವಾಲ್, ಸಿಫ್ತ್ ಕೌರ್ ಸಮ್ರಾ ಮತ್ತು ಮೇರಿ ಕೋಮ್ ಅವರೊಂದಿಗೆ ಕಪಿಲ್ ಶರ್ಮಾ ಅವರ ಹಾಸ್ಯ ಕಾರ್ಯಕ್ರಮ ’ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ೧೧ ನೇ ಸಂಚಿಕೆಯಲ್ಲಿ ಹಾಜರಾದರು. ಅಲ್ಲಿ ಎಲ್ಲರೂ ತುಂಬಾ ಮೋಜು ಮಾಡಿದರು.
ಸಾನಿಯಾ ಬಯೋಪಿಕ್ ನಲ್ಲಿ ನಾಯಕಿ ಯಾರು?
ಎಂದಿನಂತೆ ಈ ಬಾರಿಯೂ ಕಪಿಲ್ ಶರ್ಮಾ ತಮ್ಮ ಮಾತಿನ ಮೂಲಕ ಕ್ರೀಡಾ ಜಗತ್ತಿನ ನಾಲ್ವರು ಖ್ಯಾತ ಆಟಗಾರರನ್ನು ನಗೆಗಡಲಲ್ಲಿ ತೇಲಿಸಿದರು. ಈ ವೇಳೆ ಕಪಿಲ್ ಸಾನಿಯಾ ಮಿರ್ಜಾಗೆ ನಿಮ್ಮ ಬಯೋಪಿಕ್ ಸಿನಿಮಾ ಮಾಡಿದರೆ ಅದರಲ್ಲಿ ಯಾವ ನಟಿ ಇರಬೇಕು ಎಂದು ಬಯಸುತ್ತೀರಿ ಎಂದು ಪ್ರಶ್ನೆ ಕೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಸಾನಿಯಾ ಅವರು ತಮ್ಮ ಜೀವನಚರಿತ್ರೆಯ ಫಿಲ್ಮ್ ನಲ್ಲಿ ತನ್ನ ಪಾತ್ರವನ್ನು ತಾನೇ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಸಾನಿಯಾ ಮಿರ್ಜಾ ಅವರ ಬಯೋಪಿಕ್ ನ್ನು ನಿರ್ಮಿಸಿದರೆ, ಅವರ ಪ್ರೇಮಕಥೆಯಲ್ಲಿ ನಟಿಸಲು ನಾನು ಬಯಸುತ್ತೇನೆ ಎಂದು ಶಾರುಖ್ ಖಾನ್ ಒಮ್ಮೆ ಹೇಳಿದ್ದರು ಎಂದು ಕಪಿಲ್ ಸಾನಿಯಾ ಮಿರ್ಜಾಗೆ ತಿಳಿಸಿದರು. ಇದನ್ನು ಕೇಳಿದ ಸಾನಿಯಾ, ’ಮೊದಲು ನನ್ನ ಪ್ರೀತಿಪಾತ್ರರನ್ನು ನಾನು ಹುಡುಕಬೇಕಿದೆ’ ಎನ್ನುತ್ತಾ, ಆದರೂ ಶಾರುಖ್ ಇದ್ದರೆ ನಾನೇ ಸಿನಿಮಾದಲ್ಲಿ ಕೆಲಸ ಮಾಡುತ್ತೇನೆ ಮತ್ತು ಅಕ್ಷಯ್ ಕುಮಾರ್ ಇದ್ದರೆ ಖಂಡಿತ ಸಿನಿಮಾ ಮಾಡುತ್ತೇನೆ ಎಂದರು.


ಅಕ್ಷಯ್ ಕುಮಾರ್ ಸಾನಿಯಾರ ನೆಚ್ಚಿನ ನಟ:
ಕಪಿಲ್ ಶರ್ಮಾ ಅವರ ಶೋನಲ್ಲಿ ಸಾನಿಯಾ ಮಿರ್ಜಾ ಅವರು ಅಕ್ಷಯ್ ಕುಮಾರ್ ಅವರ ಅಭಿಮಾನಿ ಮತ್ತು ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಲು ತಾನು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಸಾನಿಯಾ ಮಿರ್ಜಾ ಅವರು ’ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಲ್ಲಿ ಕಪಿಲ್ ಅವರಿಗೆ ಸಮರ್ಥ ಉತ್ತರ ನೀಡಿದರು. ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಈಗ ಅವರು ತಮ್ಮ ಮತ್ತು ಮಗನ ಹೆಸರನ್ನು ಮಾತ್ರ ತಮ್ಮ ಮನೆಯ ನಾಮಫಲಕದಲ್ಲಿ ಇಟ್ಟುಕೊಂಡಿದ್ದಾರೆ.

ಕಂಗನಾ ರಣಾವತ್ ರ ಕಪಾಳಮೋಕ್ಷ ಹಗರಣ:
ಕಂಗನಾರನ್ನು ಬೆಂಬಲಿಸಿದರು ಒಂದೊಮ್ಮೆ ಕಚ್ಚಾಡಿದ್ದ ಮಾಜಿ ಗೆಳೆಯ ಹೃತಿಕ್ ರೋಷನ್!

“ಸೈನಿಕ ಮಹಿಳೆ ತನ್ನ ಸಮವಸ್ತ್ರದಲ್ಲಿ ಇರುವಾಗಲೇ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಇನ್ನಷ್ಟು ಅಪಾಯಕಾರಿ”

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಕಪಾಳಮೋಕ್ಷ ಪ್ರಕರಣ ಚರ್ಚೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಸಿಐಎಸ್‌ಎಫ್ ಮಹಿಳಾ ಭದ್ರತಾ ಸಿಬ್ಬಂದಿಯ ಈ ಕೃತ್ಯವನ್ನು ನೆಟಿಜನ್‌ಗಳು ಮತ್ತು ಚಲನಚಿತ್ರ ತಾರೆಯರು ಖಂಡಿಸುತ್ತಿರುವುದು ಕಂಡುಬಂದರೆ, ಅನೇಕ ಜನರು ಸಿಐಎಸ್‌ಎಫ್ ಯೋಧೆಯ ಪರವಾಗಿಯೂ ಕಂಡುಬರುತ್ತಿದ್ದಾರೆ. ಇದೀಗ ಕಂಗನಾ ರಣಾವತ್ ಅವರ ಮಾಜಿ ಗೆಳೆಯ,ಒಂದೊಮ್ಮೆ ಕಚ್ಚಾಡಿದ್ದರೂ ಇದೀಗ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕಂಗನಾ ರಣಾವತ್‌ಗೆ ಬಾಲಿವುಡ್‌ನಲ್ಲಿ ಬೆಂಬಲ ಸಿಕ್ಕಿತು,:
ಈ ಹಗರಣದಲ್ಲಿ ಬಾಲಿವುಡ್‌ನಿಂದ ಟಿವಿ ಉದ್ಯಮದವರೆಗೆ ಅನೇಕ ಸೆಲೆಬ್ರಿಟಿಗಳು ಕಂಗನಾ ರಣಾವತ್‌ಗೆ ಬೆಂಬಲ ನೀಡಿದ್ದಾರೆ. ಈ ಮೊದಲು ಕಂಗನಾ ರಣಾವತ್ ಬಾಲಿವುಡ್‌ನ ಮೌನದ ಬಗ್ಗೆ ತಾರೆಯರನ್ನು ತರಾಟೆಗೆ ತೆಗೆದುಕೊಂಡು ಪೋಸ್ಟ್ ನ್ನು ಹಂಚಿಕೊಂಡಿದ್ದರೂ ನಂತರ ಅವರು ಈ ಪೋಸ್ಟ್ ನ್ನು ಅಳಿಸಿ ಹಾಕಿದ್ದಾರೆ. ಇದೀಗ ಬಾಲಿವುಡ್‌ನ ತಾರೆಯರು ಕಂಗನಾ ರಣಾವತ್ ಪರವಾಗಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಆಕೆಯ ವದಂತಿಯ ಮಾಜಿ ಗೆಳೆಯ ಹೃತಿಕ್ ರೋಷನ್ ಕೂಡ ಕಾಮೆಂಟ್ ಮಾಡಿದ್ದಾರೆ.


ಹೃತಿಕ್ ರೋಷನ್ ಹೇಳೋದೇನು?:
ಕಂಗನಾ ಜೊತೆ ನಡೆದ ಹಿಂಸಾತ್ಮಕ ಘಟನೆಯ ಬಗ್ಗೆ ಹೃತಿಕ್ ರೋಷನ್ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಹಿಂಸೆ ಯಾವುದಕ್ಕೂ ಉತ್ತರವಾಗುವುದಿಲ್ಲ ಎನ್ನುತ್ತಾರೆ ಹೃತಿಕ್ ರೋಷನ್. ಏರ್‌ಪೋರ್ಟ್‌ನಲ್ಲಿ ಕಂಗನಾಗೆ ಕಪಾಳಮೋಕ್ಷ ಮಾಡಿದ ಘಟನೆಯ ಕುರಿತು ಮಾತನಾಡಿದ ಹೃತಿಕ್ ರೋಷನ್, ಹಿಂಸಾಚಾರವು ಯಾವುದಕ್ಕೂ ಉತ್ತರವಾಗುವುದಿಲ್ಲ. ಅದರಲ್ಲೂ ಅಹಿಂಸಾ ತತ್ವಗಳನ್ನು ಪಾಲಿಸಿದ ಮಹಾತ್ಮ ಗಾಂಧೀಜಿಯವರು ಹುಟ್ಟಿದ ನಮ್ಮ ದೇಶದಲ್ಲಿ. ಒಬ್ಬರ ದೃಷ್ಟಿಕೋನವನ್ನು ನಾವು ಒಪ್ಪುತ್ತೇವೋ ಬಿಡುತ್ತೇವೋ ಎಂಬುದು ಮುಖ್ಯವಲ್ಲ, ಆದರೆ ನಾವು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಸೈನಿಕ ಮಹಿಳೆ ತನ್ನ ಸಮವಸ್ತ್ರದಲ್ಲಿರುವಾಗಲೇ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದಾಗ ಅದು ಇನ್ನಷ್ಟು ಅಪಾಯಕಾರಿಯಾಗುತ್ತದೆ. ಒಮ್ಮೆ ಯೋಚಿಸಿ, ಕಳೆದ ೧೦ ವರ್ಷಗಳಲ್ಲಿ ನಮ್ಮಲ್ಲಿ ಯಾರಾದರೂ ಆಡಳಿತದ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದರೆ ,ಅಂತಹ ಪ್ರಶ್ನೆಗಳನ್ನು ಎತ್ತಿದ್ದಕ್ಕೆ ಸರಕಾರವನ್ನು ಬೆಂಬಲಿಸುವ ಕಾನ್‌ಸ್ಟೆಬಲ್‌ಗಳು ಅಂತಹ ವಿರೋಧ ಮಾತಾಡಿದವರಿಗೆ ಹೊಡೆದಿದ್ದರೆ…..ದೃಶ್ಯ ಹೇಗಿರುತ್ತೆ? ಸವಾಲು ಹಾಕಿದ್ದಾರೆ.
ಹೃತಿಕ್ ರೋಷನ್ ಕಂಗನಾ ರಣಾವತ್ ಅವರನ್ನು ಬೆಂಬಲಿಸುತ್ತಿರುವುದಕ್ಕೆ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ಅವರು ಹೃತಿಕ್ ರೋಷನ್ ಅವರ ಈ ಪೋಸ್ಟ್ ನ್ನು ತುಂಬಾ ಇಷ್ಟಪಡುತ್ತಿದ್ದಾರೆ.
ಕಂಗನಾ ಮತ್ತು ಹೃತಿಕ್ ತಮ್ಮ ಡೇಟಿಂಗ್ ಸಂಬಂಧವನ್ನು ಎಂದಿಗೂ ಸಾರ್ವಜನಿಕವಾಗಿ ಬಹಿರಂಗಪಡಿಸಲಿಲ್ಲ . ಆದರೆ ಬ್ರೇಕಪ್ ನಂತರ ಕಂಗನಾ ಹೃತಿಕ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, ಲೀಗಲ್ ನೋಟಿಸ್ ಕೂಡ ಕಳುಹಿಸಿದ್ದಾರೆ ಎಂದು ನಂಬಲಾಗಿದೆ.
ಸಿಐಎಸ್‌ಎಫ್ ಯೋಧೆಯ ಕ್ಷಮಾಯಾಚನೆ?:
ಇತ್ತ ಸಿಟ್ಟಿನಿಂದ ಕಂಗನಾರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಸಿಐಎಸ್‌ಎಫ್ ಯೋಧೆ ಈಗ ಕ್ಷಮೆ ಯಾಚಿಸಿದ್ದಾರೆಂದು ನಂಬಲಾಗುವ ವರದಿ
ಬಂದಿದೆ . ಇದನ್ನು ಹಿರಿಯ ಸಿಐಎಸ್ ಎಫ್
ಅಧಿಕಾರಿ ವಿನಯ್ ಕಾಜ್ಲಾ ಹೇಳಿದ್ದಾರೆ.
ಘಟನೆಯ ನಂತರ ಅವರು ಚಂಡೀಗಢ ವಿಮಾನ ನಿಲ್ದಾಣವನ್ನು ತಲುಪಿದರು.
ಅವರು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಅವರು ಮೊಹಾಲಿ ಪೊಲೀಸರು ಕುಲ್ವಿಂದರ್ ಕೌರ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದರು.ಸೆಕ್ಷನ್ ೩೨೩ ಮತ್ತು ೩೪೧ ರ ಅಡಿಯಲ್ಲಿ ಪ್ರಕರಣ ನೋಂದಣಿ ಮಾಡಿಕೊಂಡಿದ್ದಾರೆ. ಇವೆರಡೂ ಜಾಮೀನಿನ ಸೆಕ್ಷನ್‌ಗಳಾಗಿವೆ.ಭದ್ರತೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದನ್ನು ವಿನಯ್ ಕಾಜ್ಲಾ ಒಪ್ಪಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ. ಅತ್ತ ಕೌರ್ ಕ್ಷಮೆಯನ್ನು ಕೇಳಿದ್ದಾರಂತೆ.