ಶೋಭಾ ಯಾತ್ರೆಗೆ ಚಾಲನೆ

ಹುಬ್ಬಳ್ಳಿ,ಮಾ27 :ಯುಗಾದಿಯ ಹೊಸ ವರ್ಷದ ಪ್ರಾರಂಭದ ದಿನ ದಿನಾಂಕ 02-04-2023 ರಂದು ನಡೆಯುವ ಶ್ರೀ ರಾಮ ನವಮಿ ಉತ್ಸವ ಸಮಿತಿಯಿಂದ ಭಗವಾನ ಶ್ರೀರಾಮನ ಬೃಹತ ಮೂರ್ತಿ ಮತ್ತು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಮಹರ್ಷಿ ಭಗೀರಥ ಅವರ ಮೂರ್ತಿಯ ಬೃಹತ ಶೋಭಾ ಯಾತ್ರೆ ಕಾರ್ಯಕ್ರಮಕ್ಕೆ ಬಾನಿ ಓಣಿ ಹುಬ್ಬಳ್ಳಿ ಚಾಲನೆ ನೀಡಲಾಯಿತು.
ಉತ್ಸವ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಿರಕೋಳ ಮಾತನಾಡಿ ಹಿಂದೂ ಸಂಘಟನೆ ಬಲಿಷ್ಠಗೊಳಿಸಲು ಎಲ್ಲ ಹಿಂದೂ ಬಾಂಧವರು ಎಲ್ಲ ಹಿಂದೂ ಸಂಘಟನೆಯ ಪ್ರಮುಖರು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಕೃಷ್ಣಾ ಗಂಡಗಾಳೇಕರ, ಶಿವಾನಂದ ಸತ್ತಿಗೇರಿ, ರಂಗಾ ಕಠಾರೆ, ನಾಗರಾಜ ಕಲಾಲ, ರಾಜೇಶ ಸಂಕನಾಳ, ಆನಂದ ಧರೇಕರ, ಕಲ್ಲಪ್ಪ ಶಿರಕೋಳ, ಶ್ರೀನಿವಾಸ ಬಾರಕೇರ, ರಾಜು ಪಟ್ಟಣ, ಮಲ್ಲಿಕಾರ್ಜುನ ಸತ್ತಿಗೇರಿ, ಶಂಕರ ಜಂಗ್ಲಿ, ಅಣ್ಣಪ್ಪ ನವಲೂರ, ಮಂಜುನಾಥ ಮಾನೆ, ನಾರಾಯಣ ಶಿಂಧೆ, ಗಂಗಾಧರ ಸಂಗಮಿಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.