ಶೋಭಾ ನರ್ಸಿಂಗ್ ಹೋಮ್ ಫರ್ಟಿಲಿಟಿ ಕೇಂದ್ರದಲ್ಲಿ 3000 ಟೆಸ್ಟ್ ಟ್ಯೂಬ್ ಶಿಶುಗಳ ಜನನ

ಸೋಲಾಪೂರ,ಫೆ.27-ಜಾಗತಿಕ ಮಟ್ಟದಲ್ಲಿ ಕೀರ್ತಿ ಹೊಂದಿರುವ ಸೋಲಾಪೂರದ ಶೋಭಾ ನರ್ಸಿಂಗ್ ಹೋಮ್ ಪ್ರೈ.ಲಿ.ಇಂಡೋ-ಜರ್ಮನ್ ಟೆಸ್ಟ್ ಟ್ಯೂಬ್ ಬೇಬಿ ಕೇಂದ್ರ ಮತ್ತು ಪೋಸ್ಟ್ ಗ್ರಾಜುವೇಟ್ ಇನ್ಸಟ್ಯೂಟ್ ಕೇಂದ್ರದಲ್ಲಿ ಕಳೆದ 10 ವರ್ಷಗಳಲ್ಲಿ 3000 ಟೆಸ್ಟ್ ಟ್ಯೂಬ್ ಶಿಶುಗಳ ಮತ್ತು ಇತರೆ ಚಿಕಿತ್ಸೆಗಳ ವ್ಯವಸ್ಥೆಯ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ 10 ಸಾವಿರ ಮಕ್ಕಳ ಜನ್ಮವಾಗಿವೆ.
ಈ ಕೇಂದ್ರವು ಅತ್ಯಧಿಕ ಯಶಸ್ಸಿನ ಪ್ರಮಾಣವನ್ನು ಹೊಂದಿರುವ ವಿಶ್ವದ ಆಯ್ದ ಕೆಲವು ಕೇಂದ್ರಗಳಲ್ಲಿ ಸೇರಿಸಲಾಗಿದೆ. ಇದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಖ್ಯಾತ ವೈದ್ಯ ಡಾ.ಮಿಲಿಂದ್ ಪಾಟೀಲ ಮಾಹಿತಿ ನೀಡಿದರು.
ಈ ಕೇಂದ್ರಕ್ಕೆ ಭಾರತ ಮಾತ್ರವಲ್ಲದೆ ಅಮೇರಿಕಾ, ಇಂಗ್ಲೇಂಡ್, ಜರ್ಮನಿ, ಸಿಂಗಾಪೂರ, ಆಸ್ಟ್ರೇಲಿಯಾ, ದುಬೈ ಸೇರಿದಂತೆ ವಿವಿಧ ದೇಶಗಳಿಂದ ಅಪಾರ ಸಂಖ್ಯೆಯ ಬಂಜೆತನ ಸಮಸ್ಯೆಯುಳ್ಳ ದಂಪತಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳ ಬಳಕೆ ಹಾಗೂ ಅನುಭವಿ ಮತ್ತು ಪರಿಣಿತ ವೈದ್ಯರ ಪರಿಶ್ರಮದಿಂದ ಇದು ವಿಶ್ವದಲ್ಲೇ ಮಾನ್ಯತೆ ಪಡೆದ ಚಿಕಿತ್ಸಾ ಕೇಂದ್ರವಾಗಿದೆ.
ಈ ಕೇಂದ್ರದಲ್ಲಿ ಡಾ.ಮಿಲಿಂದ ಪಾಟೀಲ, ಡಾ.ಶೈಲೇಶ ಪಾಟೀಲ, ಡಾ.ಪ್ರತಿಭಾ ಪಾಟೀಲ, ಡಾ.ಮನಿಷಾ ಪಾಟೀಲ, ಡಾ.ಗಾಯತ್ರಿ ಅಪ್ಟೆ, ಡಾ.ಶುಭಾಂಗಿ, ಡಾ.ಜ್ಯೋತಿ ವರ್ಣೆಕರ್, ಡಾ.ಜ್ಯೋತಿ ಗಾಯಕವಾಡ ಅವರು ಸೇವೆ ಸಲ್ಲಿಸುತ್ತಿದ್ದಾರೆ.