ಶೈಕ್ಷಣಿಕ ಸಾಲ ಪಡೆದ ಪಾಲಕರ ನೆರವಿಗೆ ಬರಲು ಲೀಡ್ ಬ್ಯಾಂಕ್‍ಗಳಿಗೆ ಪ್ರಾದೇಶಿಕ ಆಯುಕ್ತರ ಸೂಚನೆ

ಕಲಬುರಗಿ,ಜ.5:ಶೈಕ್ಷಣಿಕ ಸಾಲ ಪಡೆದ ಪಾಲಕರ ನೆರವಿಗೆ ಬರಬೇಕು ಎಂದು ಲೀಡ್ ಬ್ಯಾಂಕ್‍ಗಳಿಗೆ ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್ ಅವರು ಸೂಚನೆ ನೀಡಿದ್ದಾರೆ.
ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಹಾಘೂ ಬಿಜೆಪಿ ಮುಖಂಡ ಎಂ.ಬಿ. ಅಂಬಲಗಿ ಅವರು ಉನ್ನತ ವ್ಯಾಂಗಕ್ಕಾಗಿ ಕಲ್ಯಾನ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ್ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿವಿಧ ಬ್ಯಾಂಕ್‍ಗಳಿಂದ ಪಡೆದ ಶೈಕ್ಷಣಿಕ ಸಾಲಕ್ಕಾದ ಬಡ್ಡಿ ಹಣ ಕೇಂದ್ರ ಸರ್ಕಾರದಿಂದ ಅಥವಾ ಬ್ಯಾಂಕುಗಳೇ ವಿನಾಯ್ತಿ ನೀಡಿ ಕೇವಲ ಅಸಲನ್ನು ಕಂತುಗಳ ರೂಪದಲ್ಲಿ ಪಡೆದು ಶೈಕ್ಷಣಿಕ ಸಾಲ ಪಡೆದ ಪಾಲಕರಿಗೆ ಸಾಲದಿಂದ ಮುಕ್ತಗೊಳಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದಾಗ, ಸೂಚನೆಯನ್ನು ನೀಡಿದರು.
ಮನವಿಗೆ ಸ್ಪಂಧಿಸಿದ ಪ್ರಾದೇಶಿಕ ಆಯುಕ್ತರು ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಲೀಡ್ ಬ್ಯಾಂಕ್‍ಗಳಿಗೆ ಪತ್ರ ಬರೆದು ಶೈಕ್ಷಣಿಕ ಸಾಲ ಪಡೆದು ದುಬಾರಿ ಬಡ್ಡಿಯಿಂದ ಸಾಲ ಕಟ್ಟಲಾಗದೆ ಪಾಲಕರು ತೊಂದರೆಯಲ್ಲಿರುವದರಿಂದ ಕೇಂದ್ರ ಸರಕಾರದ ಸಲಹೆಯಂತೆ ಶೈಕ್ಷಣಿಕ ಸಾಲಕ್ಕಾದ ಬಡ್ಡಿ ಕೇಂದ್ರದಿಂದ ಪಡೆದು ಅಥವಾ ಬ್ಯಾಂಕ್‍ಗಳಿಂದ ವಿನಾಯ್ತಿ ನೀಡಿ ಅವರ ನೆರವಿಗೆ ಬರಬೇಕೆಂದು ಸೂಚಿಸಿದ್ದಾರೆ ಎಂದು ಅಂಬಲಗಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅನೇಕ ಫ್ಯಾಕ್ಟರಿಗಳು ಲಾಸಾಗಿರುವಾಗ ಸಂಪೂರ್ಣ ಬಡ್ಡಿ ಬಿಟ್ಟು ಅಸಲು ಪಡೆಯುವ ತಮ್ಮ ಬ್ಯಾಂಕುಗಳ ಕಾರ್ಯ ಮೆಚ್ಚುವಂತದ್ದು. ಶೈಕ್ಷಣಿಕ ಸಾಲ ಪಡೆದು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಆದರೆ ಶೇ. 90 ರಷ್ಟು ಮಕ್ಕಳು ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ. ಶೇಕಡಾ 10ರಷ್ಟು ಮಕ್ಕಳು ತಮ್ಮ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‍ಗಳು ಶೈಕ್ಷಣಿಕ ಸಾಲ ಪಡೆದ ಪಾಲಕರ ನೆರವಿಗೆ ಬಂದು ಸಾಲಕ್ಕಾದ ಬಡ್ಡಿ ಬಿಟ್ಟು ಉಳಿದ ಹಣ ಕಂತುಳಲ್ಲಿ ಪಡೆದರೆ ಸಾಕಷ್ಟ ಪಾಲಕರಿಗೆ ಅನುಕೂಲವಾಗುತ್ತದೆ. ಶೇಕಡಾ 25ರಷ್ಟು ಪಾಲಕರು ಪ್ರತಿ ತಿಂಗಳು ಹಣ ತುಂಬಿದ್ದಾರೆ. ಆ ಹಣವನ್ನು ಬಡ್ಡಿಯಂದು ಬ್ಯಾಂಕಗಳು ಪರಿಗಣಿಸಿದ್ದಾರೆ. ಅದರ ಬದಲಾಗಿ ಆ ಹಣವನ್ನು ಅಸಲಿನಲ್ಲಿ ಪಡೆದು ಉಳಿದ ಅಸಲನ್ನು ಪಾಲಕರಿಂದ ಪಡೆದರೆ ಪಾಲಕರು ಸಂಪೂರ್ಣವಾಗಿ ಅಸಲು ತುಂಬಿ ಸಾಲದಿಂದ ಮುಕ್ತರಾಗುತ್ತಾರೆ. ಆ ದಿಸೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಸಹಾಯ ಮಾಡಬೇಕೆಂದು ಅವರು ಕೋರಿದ್ದಾರೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ವಿವಿಧ ಬ್ಯಾಂಕ್‍ಗಳ ಪ್ರಮುಖರನ್ನು ಆಯಾ ಲೀಡ ಬ್ಯಾಂಕ ಪ್ರಮುಖರು ಕರೆದು ಶೈಕ್ಷಣಿಕ ಸಾಲಕ್ಕಾದ ಬಡ್ಡಿಯಿಂದ ಮುಕ್ತಿಗೊಳಿಸಿ ಕೇವಲ ಅಸಲ ಪಡೆಯುವಂತೆ ಸೂಚಿಸಿರುವದರ ಮುಖಾಂತರ ಶೈಕ್ಷಣಿಕ ಸಾಲ ಪಡೆದ ಪಾಲಕರ ನೆರವಿಗೆ ಬರಬೇಕೆಂದು ಅವರು ಮನವಿ ಮಾಡಿದ್ದು, ಈಗಾಗಲೇ ಈಶಾನ್ಯ ವಲಯ ಶಿಕ್ಷಕರ ವೇದಿಕೆ ಕಲ್ಯಾಣ ಕರ್ನಾಟಕ ಎಲ್ಲಾ ಬ್ಯಾಂಕುಗಳ ಪ್ರಮುಖರಿಗೆ ಮನವಿ ಪತ್ರ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.