
ಕಲಬುರಗಿ: ಮಾ.5:ಸರ್ಕಾರ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಹಣ ವೆಚ್ಚ ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರ ಫಲ ವಿದ್ಯಾರ್ಥಿಗಳಿಗೆ ಮುಟ್ಟಬೇಕಾದರೆ ಶಿಕ್ಷಕರು, ಪಾಲಕ-ಪೋಷಕ ವರ್ಗದವರ ಜೊತೆಗೆ ಸಮುದಾಯದ ಸಕ್ರಿಯ ಭಾಗವಹಿಸುವಿಕೆ, ಸಹಕಾರ ಅವಶ್ಯಕವಾಗಿದೆ. ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಹುದುಗಿದ್ದು, ಅದನ್ನು ಗುರ್ತಿಸಿ, ಬೆಳೆಸುವ ಕಾರ್ಯವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ ಹೇಳಿದರು.
ಆಳಂದ ತಾಲೂಕಿನ ಗುಂಜ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಜೀಮ್ ಪ್ರೇಮಜೀ ಫೌಂಡೇಶನ್ ಮತ್ತು ಕ್ಯಾಡ್‍ಮ್ಯಾಕ್ಸ್ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶಾಲೆ ಇವುಗಳ ವತಿಯಿಂದ ಶನಿವಾರ ಶಾಲೆಯ ಆವರಣದಲ್ಲಿ ಜರುಗಿದ ಮಕ್ಕಳ ಕಲಿಕಾ ಮೇಳ ಮತ್ತು 'ಸ್ವಾಭಿಮಾನಿ ಸಾರ್ವಜನಿಕ ಶಾಲೆ' ಪುರಸ್ಕಾರಕ್ಕೆ ಭಾಜನವಾದ ಪ್ರಯುಕ್ತ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಸಿ.ಮಂಗೊಂಡಿ ಮಾತನಾಡಿ, ನಮ್ಮ ಶಾಲೆ ಪುರಸ್ಕಾರಕ್ಕೆ ಪಾತ್ರವಾಗಲು ಸಹಕರಿಸಿದ ಎಲ್ಲರು ಅಭಿನಂದನಾರ್ಹರು. ಸಮುದಾಯ ಸಹಕಾರ ನೀಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ಶಾಲೆಯ ಆವರಣದಲ್ಲಿ ಕೈತೋಟ, ಹೂತೋಟವಿದೆ. ತರಗತಿಯ ಕೊಠಡಿಗಳಿಗೆ ಬಣ್ಣ ಬಳಿಯಲಾಗಿದೆ.ಹಸಿರು ಬೋರ್ಡ್ ಬಳಕೆ, ಡಿಜಿಟಲ್ ತರಗತಿ ಜರುಗುತ್ತಿವೆ. ವಿಶೇಷ ಬೋಧನೆ ಮಾಡಲಾಗುತ್ತಿದೆ. ಪ್ರಶಸ್ತಿಯ ಮೊತ್ತದ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಲಾಗಿದೆ. ಮಕ್ಕಳಿಗೆ ಊಟ ಮಾಡಲು ಒಂದು ಹಾಲ್, ಓಳಾಂಗಣ ಸಿಸಿ ರಸ್ತೆ, ಕಂಪೌಂಡ್ ನಿರ್ಮಿಸುವ ಕಾರ್ಯ ಜರುಗಬೇಕಾಗಿದೆ. ಮೂವರು ಶಿಕ್ಷಕರ ಹುದ್ದೆ ಖಾಲಿ ಇದ್ದು, ಶೀರ್ಘವಾಗಿ ಭರ್ತಿಯಾದರೆ ಅನಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮೀಪುತ್ರ ಎಸ್.ಯಂಕಂಚಿ, ಗ್ರಾ.ಪಂ ಸದಸ್ಯರಾದ ಜಗದೇವಪ್ಪ ಎಸ್.ಯಂಕಂಚಿ, ನಿಕಿತಾ ಮರಡಿ, ಕಲಾವತಿ ಜಮಾದಾರ, ಸುಷ್ಮಾ ನವಲೆ, ಉಪನ್ಯಾಸಕ ಎಚ್.ಬಿ.ಪಾಟೀಲ, ಕ.ರಾ.ಪ್ರಾ.ಶಿ.ಸಂಘದ ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಪ್ರಮುಖರಾದ ಶಿವಶಂಕರ ವೇದಶೇಟ್ಟಿ, ಶಿವಯೋಗಪ್ಪ ಬಿರಾದಾರ, ಗುಂಡಪ್ಪ ಕಟೇಕಲ್, ಮಲ್ಲಿಕಾರ್ಜುನ, ಅಲ್ಲಿಮುನಿಸ್ ಬೇಗಂ, ಬಸವರಾಜ ರೋಳೆ, ನಾಮದೇವ ಎಸ್.ಬಬಲಾದಕರ, ವೀರಣ್ಣ ಬೋಳಶೆಟ್ಟಿ ನರೋಣಾ, ಶ್ರೀಶೈಲ್ ಮಾಡ್ಯಾಳ್, ಶಂಕರ, ನಾಗರಾಜ ಗಾಡೆ, ಸಂಗಯ್ಯಸ್ವಾಮಿ ಸೇರಿದಂತೆ ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಶಾಲೆ ಮತ್ತು ಸ್ಥಳೀಯ ಪ್ರೌಢಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕಲಿಕಾ ಮೇಳದ ಪ್ರಯುಕ್ತ ವಿವಿಧ ಮಾದರಿಗಳನ್ನು ಪ್ರದರ್ಶಿಸದರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.