ಶೈಕ್ಷಣಿಕ ಸಾಧನೆಗೆ ಪ್ರಶಸ್ತಿಯ ಗರಿ

 ಚಿತ್ರದುರ್ಗ.ಸೆ.೭; ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ರಾಂಪುರ ಎಸ್.ಪಿ, ಎಸ್.ಆರ್ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಡಾ.ತಿಮ್ಮಣ್ಣ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2021-22ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರು ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೇರಹಳ್ಳಿ ಗ್ರಾಮದವರಾಗಿದ್ದು, ಕಳೆದ 21 ವರ್ಷಗಳಿಂದ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, ಎನ್.ಎಸ್.ಎಸ್ ಅಧಿಕಾರಿಯಾಗಿ ವಿಶೇಷ ವಾರ್ಷಿಕ ಶಿಬಿರಗಳು, ರಕ್ತದಾನ ಶಿಬಿರ, ವಿಶೇಷ ಸಾಮಾಜಿಕ ಅರಿವು ಶಿಬಿರಗಳು, ಉಪನ್ಯಾಸ ಕಾರ್ಯಕ್ರಮಗಳು ಅರಣ್ಯೀಕರಣ ಅಭಿವೃದ್ಧಿ ಮುಂತಾದ ಸಮಾಜಿಕ ಸೇವೆ ಕಾರ್ಯಕ್ರಮಗಳ ಸೇವೆಯನ್ನು ಮಾಡಿರುತ್ತಾರೆ. ಇವರು ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸಿರುತ್ತಾರೆ ಹಾಗೂ ಇವರು ಅಂತರಾಷ್ಟಿçÃಯ ರಾಷ್ಟಿçÃಯ ಮತ್ತು ರಾಜ್ಯ ವಿಚಾರಣ ಸಂಕೀರ್ಣಗಳಲ್ಲಿ ಭಾಗವಹಿಸಿ ಸುಮಾರು 20ಕ್ಕೂ ಹೆಚ್ಚು ಲೇಖನಗಳನ್ನು ಮಂಡಿಸಿದ್ದಾರೆ ಮತ್ತು ಚಿತ್ರದುರ್ಗ ಜಿಲ್ಲೆಯ ಸಣ್ಣ ಉಳಿತಾಯದಿಂದ ಮಹಿಳಾ ಸಬಲೀಕರಣ ಮತ್ತು ತಾಯಿ ಎದೆಹಾಲು, ಮಗುವಿಗೆ ಎಷ್ಟು ಆರೋಗ್ಯದಾಯಕ, ಎಂಬ 2 ಗ್ರಂಥಗಳನ್ನು ಬರೆದು ಬಿಡುಗಡೆಗೊಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇವರನ್ನು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮತ್ತು ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘ ಅಭಿನಂದಿಸಿದೆ. ರಾಜ್ಯಾಧ್ಯಕ್ಷರಾದ ನಿಂಗೇಗೌಡ, ಕಾರ್ಯಾಧ್ಯಕ್ಷ ವೆಂಕಟೇಶ್ ಕಾರ್ಯದರ್ಶಿ ಮಾಲೀಪಾಟೀಲ್ ಜಿಲ್ಲಾ ಉಪನ್ಯಾಸಕ ಸಂಘದ ಅಧ್ಯಕ್ಷ ಎಸ್.ಲಕ್ಷö್ಮಣ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ತಿಮ್ಮಯ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಸಿ ಶೋಭಾ, ಎಸ್.ಜೆ.ಆರ್.ಆರ್.ವೈ ಸಂಸ್ಥೆಯ ಅಧ್ಯಕ್ಷ ಬಿ.ಪಿ ಜಯಪ್ರಕಾಶ್ ಉಪಾಧ್ಯಕ್ಷ ಜಿ.ಬಿ ಬಸವರೆಡ್ಡಿ ಕಾರ್ಯಾಧ್ಯಕ್ಷರು ಶಂಕರ್‌ರೆಡ್ಡಿ ಸಹ ಕಾರ್ಯದರ್ಶಿ ಹೆಚ್.ಟಿ ನಾಗರೆಡ್ಡಿ, ಖಜಾಂಚಿ ಆರ್.ಜಿ ಗಂಗಾಧರಪ್ಪ, ಪ್ರೌಢಶಾಲಾ ವಿಭಾಗದ ಅಧ್ಯಕ್ಷರಾದ ಶ್ರೀಕಾಂತ್‌ರೆಡ್ಡಿ ಮತ್ತು ಎಲ್ಲಾ ನಿರ್ದೇಶಕರುಗಳು  ಅಭಿನಂದಿಸಿದ್ದಾರೆ.