
ಸಂಜೆವಾಣಿ ವಾರ್ತೆ
ದಾವಣಗೆರೆ-ಆ.೧೩; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಸಾಹಿತ್ಯಿಕ ಶೈಕ್ಷಣಿಕ ಸಾಧಕಿ, ಕನ್ನಡ ಶಿಕ್ಷಕಿ ಶ್ರೀಮತಿ ಶಶಿಕಲಾ ಶಂಕರಮೂರ್ತಿಯವರಿಗೆ ಇತ್ತೀಚಿಗೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಬೃಹತ್ ಭವ್ಯ, ದಿವ್ಯ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಜೀವನ ಚರಿತ್ರೆಯನ್ನು ಸ್ವಯಂ ಪ್ರೇರಣೆಯಿಂದ ಸುಮಾರು 3 ಲಕ್ಷ ರೂ.ಗಳ ಖರ್ಚು ಮಾಡಿ “ಸಾಂಸ್ಕೃತಿಕ ಸೌರಭ” ಬೃಹತ್ ಗ್ರಂಥವನ್ನು “ಸೌಹಾರ್ದ ಪ್ರಕಾಶನ”ದಡಿಯಲ್ಲಿ ಸೃಷ್ಟಿಸಿದ ಈ ಶೈಕ್ಷಣಿಕ ಕಾಳಜಿಯ ಶಿಕ್ಷಕಿಗೆ ಕೃತಜ್ಞತೆ ಸಲ್ಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರು, ಅಂತರಾಷ್ಟಿçÃಯ ಖ್ಯಾತ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಚಲನಚಿತ್ರ ನಟ, ನಿರ್ದೇಶಕ ಬೆಂಗಳೂರಿನ ಟಿ.ಎಸ್.ನಾಗಾಭರಣರವರು ಸೇರಿದಂತೆ ವೇದಿಕೆಯಲ್ಲಿ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ದಂಪತಿಗಳು, ಸಂಸ್ಥೆಯ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್ ದಂಪತಿಗಳು, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಥಾನದ ಅಧ್ಯಕ್ಷರಾದ ಬೆಂಗಳೂರಿನ ಡಾ. ನಾಗೇಶ್ ಸಂಜೀವ ಕಿಣಿ, ಸಮಿತಿ ಸದಸ್ಯರಾದ ಶ್ರೀಮತಿ ವಂದನಾ ಶೆಣೈ, ಶ್ರೀಮತಿ ಮುಕ್ತಾ ಶ್ರೀನಿವಾಸ ಪ್ರಭು, ಶ್ರೀಮತಿ ವಂದನಾ ಶ್ರೀಧರ್ ನಾಯಕ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ, ಸಮಿತಿ ಸದಸ್ಯರಾದ ಶೈಲಾ ವಿಜಯಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು ಅಭಿನಂದಿಸಲಾಯತು. ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳು ತುಂಬಾ ಸಂತೋಷದಿAದ ಶುಭ ಹಾರೈಸಿದರು.