ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಔರಾದ :ಆ.9: ಗುಲ್ಬರ್ಗ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಿನಿ ವಿಧಾನಸೌಧ ಎದುರಿಗೆ ಪ್ರತಿಭಟನೆ ನಡೆಸಿ ಮಾನ್ಯ ತಹಸೀಲ್ದಾರ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಗುಲ್ಬರ್ಗ ವಿಶ್ವವಿದ್ಯಾನಿಲಯ ಕಲ್ಬುರ್ಗಿ 1984 ರಲ್ಲಿ ಸ್ಥಾಪನೆಯಾಗಿ ಇಲ್ಲಿಗೆ 40 ವರ್ಷಗಳು ಕಳೆಯುತ್ತ ಬಂದಿದೆ. ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತು ಬಂದ ಸರದಿ ವಿಶ್ವವಿದ್ಯಾಲಯವು ನಂತರ ವರ್ಷದಲ್ಲಿ ಶೈಕ್ಷಣಿಕ ಕಾಶಿ ಅಕ್ಷರ ದಾಸೋಹದ ಮಂದಿರ ಆಗುವ ಬದಲು ಭ್ರಷ್ಟಾಚಾರದ ವ್ಯವಸ್ಥೆಯಾಗಿ ರೂಪುಗೊಂಡಿದೆ. ಅನೇಕ ವರ್ಷಗಳಿಂದ ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ಆಧೋಗತಿಗೆ ತಲುಪಿದ್ದು ಪಾರದರ್ಶಕ ಆಡಳಿತ ನೀಡಲು ವಿಫಲತೆಯನ್ನು ಕಂಡಿದೆ. ಇದರಿಂದ ವಿದ್ಯಾರ್ಥಿಗಳ ಕನಸು ನನಸಾಗದೆ ಉಳಿದಿದೆ.

ಸರ್ಕಾರದ ನಿರ್ಲಕ್ಷತನ ಇಲ್ಲಿನ ಅಧಿಕಾರಿಗಳ ಮತ್ತು ಆಯಾ ವಿಭಾಗ ನೌಕರಸ್ಥರಿಗೆ ವರವಾಗಿದೆ. ಆದ್ದರಿಂದ ಇಲ್ಲಿನ ಭ್ರಷ್ಟಾಚಾರದಿಂದ ಅಮಾಯಕ ವಿದ್ಯಾರ್ಥಿಗಳನ್ನು ಶೋಷಣೆಗೆ ಎಡೆ ಮಾಡಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ನವನಾಥ್ ಕೋಳಿ, ಮಲ್ಲಿಕಾರ್ಜುನ, ರಮೇಶ ವಾಘಮಾರೆ, ಅನಿಲ್ ಮೇತ್ರೆ, ಸಂತೋಷ್, ರಾಹುಲ್, ಸಂಗ್ರಾಮ್, ತಾನಜಿ, ಅಶ್ವಿನಿ, ಜ್ಯೋತಿ, ಕವಿತಾ, ಜೈಯಶ್ರೆ, ಅವ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸಮಸ್ಯೆಗಳು :

  1. ಸರಿಯಾದ ಸಮಯಕ್ಕೆ ಪರೀಕ್ಷೆಗಳು ನಡೆಯದೇ ಇರುವುದು.
  2. ಉದ್ದೇಶಪೂರ್ವವಾಗಿ ಅಂಕಪಟ್ಟಿಯಲ್ಲಿ ಸೊನ್ನೆ ಬರುವಂತೆ ಮಾಡುವುದು.
  3. ಆವಕ ಶಾಖೆಗೆ ಕೊಟ್ಟ ಅರ್ಜಿಗಳನ್ನು ನಿರ್ಲಕ್ಷ್ಯ ಮಾಡುವುದು.
  4. ವಿದ್ಯಾರ್ಥಿಗಳ ಅರ್ಜಿಯನ್ನು ತಿಂಗಳುಗಟ್ಟಲೆ ಮುಂದೂಡುವುದು .
  5. ಕುಂಟು ನೆಪವೊಡ್ಡಿ ಅಂತಿಮ ವರ್ಷದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ತಡೆಗಟ್ಟುವುದು.
  6. ಪದವಿ ಪರೀಕ್ಷೆ ಕೇಂದ್ರಗಳಲ್ಲಿ ಅರ್ಹತೆ ಇಲ್ಲದ ಉಪನ್ಯಾಸಕರನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕಮಾಡುವುದು .
  7. ಹೊಸ ಪದವಿ ಕಾಲೇಜುಗಳಿಗೆ ನಿಯಮ ಮೀರಿ ಅರ್ಹತೆ ಮತ್ತು ಸೌಲಭ್ಯಗಳನ್ನು ಇಲ್ಲದಿದ್ದರೂ ಅನುಮತಿ ನೀಡಲಾಗುತ್ತಿದೆ.
  8. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕ ಪಟ್ಟಿ ಕೊಡದೆ ಇರುವುದು.