ಶೈಕ್ಷಣಿಕ ಸದುಪಯೋಗಕ್ಕಾಗಿ ವಿದ್ಯಾರ್ಥಿ ವೇತನ ವಿತರಣೆ

ಸೊರಬ.ನ.೯:ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರದ ಮುಕ್ತ ನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕೆಂದು ಪುರಸಭೆ ಅಧ್ಯಕ್ಷ ಈರೇಶಪ್ಪ ಮೇಸ್ತ್ರಿ ಹೇಳಿದರು.ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ೨೦೨೨-೨೩ನೇ ಸಾಲಿನ ೩೪.೧ ರ ಟಿಎಸ್ ಪಿ ಅನುದಾನದ ಯೋಜನೆಯಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಎಸ್ ಸಿಪಿ ಯೋಜನೆಯ ಅನುದಾನದ ಅಡಿಯಲ್ಲಿ ೭.೨೫ ರ ಇತರೆ ಹಿಂದುಳಿದ ವರ್ಗಗಳ ಅನುದಾನದ ಅಡಿಯಲ್ಲಿ ಆಯ್ಕೆಯಾದ  ಒಟ್ಟು ೩೬ ವಿದ್ಯಾರ್ಥಿಗಳಿಗೆ ಮುಕ್ತ ನಿಧಿ ವಿದ್ಯಾರ್ಥಿವೇತನದ ಚೆಕ್ಕನ್ನು  ವಿತರಿಸಿ ಮಾತನಾಡಿದ ಅವರು  ೧೫ ನೇ ಹಣಕಾಸು ಯೋಜನೆಯ ಕೇಂದ್ರ ಸರ್ಕಾರದ ಅನುದಾನದ ೧ ಕೋಟಿ ೭ ಲಕ್ಷದಲ್ಲಿ ಉಳಿದಿರುವ ಹಣವನ್ನು ಮುಕ್ತ ನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ ಶೈಕ್ಷಣಿಕವಾಗಿ ಅಗತ್ಯವಿರುವ ಪಠ್ಯಪುಸ್ತಕ ಸಾಮಗ್ರಿಗಳನ್ನು ಪಡೆದುಕೊಳ್ಳಲು  ಆರ್ಥಿಕವಾಗಿ ಸಹಾಯವಾಗಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಗಿರೀಶ್,ಪುರಸಭಾ ಸದಸ್ಯರಾದ ಅನ್ಸರ್ ಅಹಮ್ಮದ್,ಪ್ರೇಮಾ,ಜಯಲಕ್ಷ್ಮಿ,ಶ್ರೀರಂಜಿನಿ,ಅಫ್ರೀನ್,ಟೌನ್ ಬಿಜೆಪಿ ಅಧ್ಯಕ್ಷ ಅಶೋಕ್ ಶೇಟ್,ಸಿಬ್ಬಂದಿಗಳಾದ ಶಿವಪ್ಪ ,ಲಕ್ಷ್ಮೀನಾರಾಯಣ,ಸೇರಿದಂತೆ ಮೊದಲಾದವರಿದ್ದರು.