ಶೈಕ್ಷಣಿಕ ವರ್ಷಾರಂಭಕ್ಕೆ ಸಕಲ ಸಿದ್ಧತೆ

ಲಕ್ಷ್ಮೇಶ್ವರ, ಮೇ29: ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2023 24ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಿಂದ ನೀಡಿರುವ ಅವರು ಉಭಯ ತಾಲೂಕುಗಳ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಸಭೆ ಕರೆದು ಎಲ್ಲ ಮಾರ್ಗಸೂಚಿಗಳನ್ನು ಹಾಗೂ ಪೂರ್ವ ಸಿದ್ಧತೆಯ ಬಗ್ಗೆ ಕೈಗೊಳ್ಳಬೇಕಾದ ವಿವರಗಳನ್ನು ತಿಳಿಸಲಾಗಿದೆ ಎಂದರು.
ತಾಲೂಕಿನಲ್ಲಿ 172 ಸರ್ಕಾರಿ ಪ್ರಾಥಮಿಕ ಶಾಲೆಗಳು 28 ಸರ್ಕಾರಿ 15 ಅನುವಾನಿತ 15 ಅನುದಾನ ರಹಿತ ಹೀಗೆ ಒಟ್ಟು ಉಭಯ ತಾಲೂಕುಗಳಲ್ಲಿನ 230 ಶಾಲೆಗಳ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಲಾಗಿದೆ ಎಂದರು.
29ರಂದು ಶಾಲೆಗಳು ಆರಂಭವಾಗಲಿದ್ದು ಅಂದು ಶಾಲಾ ವಲಯವನ್ನು ಸೂಸಜಿತಗೊಳಿಸುವುದಕ್ಕಾಗಿ ಹಾಗೂ ದಿನ 30ರಂದು ಎಸ್ ಡಿ ಎಂ ಸಿ ಸಭೆ ಕರೆದು ಪಾಲಕರ ಜೊತೆಗೆ ಚರ್ಚಿಸಿ ವಿಶೇಷವಾದ ನಮ್ಮ ನಡೆ ಶಾಲೆ ಕಡೆ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲು ಪ್ರೇರೇಪಿಸಲಾಗಿದೆ.
ದಿನಾಂಕ 31ರಂದು ಅತ್ಯಂತ ಸದಗರ ಸಂಭ್ರಮದಿಂದ ಶೈಕ್ಷಣಿಕ ವರ್ಷದ ಆರಂಭಕ್ಕೆ ಉಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರಿಗೆ ನಿರ್ದೇಶನ ನೀಡಲಾಗಿದೆ ಎಂದರು ತಾಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾ ದಿನದಿಂದಲೇ ಬಿಸಿಯೂಟ, ಕ್ಷೀರ ಭಾಗ್ಯ ,ಉಚಿತ ಪುಸ್ತಕ ವಿತರಣೆ ಮಾಡಲಾಗಿದೆ. ಒಟ್ಟು 1,96, 792 ಪುಸ್ತಕಗಳನ್ನು ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ, ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾರಾಟ ಮಾಡಲು 41,756 ಪುಸ್ತಕಗಳನ್ನು ವಿತರಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಈಶ್ವರ್ ಮೆಡ್ಲೇರಿಯವರು ಈ ಕುರಿತು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.