ಶೈಕ್ಷಣಿಕ ವರ್ಷದಿಂದ ಅರಕೇರಾದಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಾರಂಭ

ಅರಕೇರಾ,ಮಾ.೧೯- ಪಟ್ಟಣದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಪ್ರಾರಂಭಿಸಲು ತಾತ್ಕಾಲಿಕವಾಗಿ ಅನುಮೋದನೆ ದೊರೆತ್ತಿದ್ದು, ಇಲಾಖೆಯ ಆದೇಶ ಮೇರೆಗೆ ಅಧಿಕಾರಿಗಳು ಇಂದು ಸ್ಥಳ ಪರಿಶೀಲನೆ ಮಾಡಿದರು. ಬರುವ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಪ್ರಾರಂಭಿಸಲು ಸೂಕ್ತ ಸೌಲಭ್ಯಗಳನ್ನು ಹೊಂದಿರುವ ಕಟ್ಟಡಗಳನ್ನು ವೀಕ್ಷಣೆ ಮಾಡಿದರು.
ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ೧೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತ ಮಂಡಳಿಗೆಸೂಚನೆ ನೀಡಿದರು. ಒಂದು ವಾರದಲ್ಲಿ ಸ್ಥಳದ ದಾಖಲೆಗಳು ಒದಗಿಸಲು ತಿಳಿಸಿದರು.
ಈ ವೇಳೆ ಬಳ್ಳಾರಿ ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲ್ ವಿಶ್ವನಾತನ್, ಹಟ್ಟಿ ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲ್ ವಿಜಯಕುಮಾರ್, ದಿನೇಶ್, ಸ್ಥಳೀಯ ಬಿಜೆಪಿ ಮುಖಂಡರಾದ ಕೆ.ಅನಂತರಾಜ ನಾಯಕ, ಮಾಜಿ ಜಿಪಂ ಸದಸ್ಯ ಸತ್ಯನಾರಾಯಣ ನಾಯಕ ಪೋ.ಪಾಟೀಲ್, ಡಾ.ಹೆಚ್.ಎ.ನಾಡಗೌಡ, ಸೀತಣ್ಣ ನಾಯಕ ಗುತ್ತೇದಾರ, ಜಾವೀದ್ ಆರ್.ಚಿಂಚೋಳಿಕರ್ ಗ್ರಾಪಂ ಉಪಾಧ್ಯಕ್ಷ ಸಿದ್ದಪ್ಪ ಪೈಕಾರ, ಶಿಕ್ಷಣ ಇಲಾಖೆ ಆರ್.ಇಂದಿರಾ, ಶಿವರಾಜ ಪೂಜಾರಿ, ಮುದುಕಪ್ಪಮೆಣಸಿನಕಾಯಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಇನ್ನಿತರು ಇದ್ದರು.