ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ: ಪಟ್ಟದ್ದೇವರು

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.96018517, 0.50416666);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

ಭಾಲ್ಕಿ: ಏ.4:ಗಡಿ ಭಾಗದಲ್ಲಿಯ ಶೈಕ್ಷಣಿಕ ಬೆಳಗಣಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಬಾಜೋಳಗಾ ಕ್ರಾಸ್ ಹತ್ತಿರದ ಶ್ರೀ ರೇವಪ್ಪಯ್ಯಾ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ, ನೂತನ ಕಟ್ಟಡ ಉದ್ಘಾಟನೆ ಹಾಗು ಸಂಸ್ಥೆಯ ಸಂಸ್ಥಾಪಕ ಸುಭಾಷ ಹುಲಸೂರೆಯವರ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಗಡಿ ಜಿಲ್ಲೆ ಬೀದರಿನ ಭಾಲ್ಕಿ ತಾಲೂಕಿನಲ್ಲಿ ಶೈಕ್ಷಣಿಕ ಬೆಳವಣಿಗೆ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಶ್ರಮಿಸುತ್ತಿವೆ. ಮರಾಠಿ, ಉರ್ದು ಪ್ರಾಬಲ್ಯದ ಈ ಭಾಗದಲ್ಲಿ ಕನ್ನಡ ಶಾಲೆಗಳನ್ನು ತೆರೆದು, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಚೇತನವನ್ನು ಬಿತ್ತರಿಸುತ್ತಿರುವ ವಿದ್ಯಾಚೇತನ ಶಾಲೆಯು ವರ್ಷದಿಂದ ವರ್ಷಕ್ಕೆ ಉತ್ತುಂಗ ಸ್ಥಿತಿ ತಲುಪುತ್ತಲಿದೆ. ತಗಡಿನ ಶೆಡ್ಡಿನಲ್ಲಿ ಪ್ರಾರಂಭವಾದ ಈ ಶಾಲೆ ಉತ್ತಮ ಕಟ್ಟಡ ನಿರ್ಮಿಸಿ, ಈ ಭಾಗದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಉತ್ತಮ ಶಿಕ್ಷಣ ನೀಡುತ್ತಿರುವುದು ಪ್ರಶಂಶನೀಯ ಕಾರ್ಯವಾಗಿದೆ ಎಂದು ಬಣ್ಣಿಸಿದರು. ಅದೇರೀತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸುಭಾಷ ಹುಲಸೂರೆಯವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಜೀವನ ನಡೆಸುತ್ತಿರುವುದು, ಅವರ ಕಾರ್ಯಕ್ಷಮತೆಗೆ ಮೆಚ್ಚುವಂತಹದ್ದಾಗಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೇವಪ್ಪಯ್ಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬಸಯ್ಯಾ ಪಟವಾದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಸುಭಾಷ ಹುಲಸೂರೆ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ವಿಶೇಷ ಉಪನ್ಯಾಸ ಮಂಡಿಸಿದರು. ಕಲ್ಯಾಣರಾವ ಕುಂಬಾರಗೇರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇವೇಳೆ ಸೇವಾ ನಿವೃತ್ತ ಸುಭಾಷ ಹುಲಸೂರೆ ದಂಪತಿಗಳಿಗೆ ಶಿಕ್ಷಣ ಇಲಾಖೆಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಚನ್ನಬಸಪ್ಪ ಬಿರಾದಾರ, ರೇವಪ್ಪಯ್ಯಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಗನ್ನಾಥ ಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ, ಸರ್ಕಾರಿ ಪ್ರಾಥಮಿಕ ಶಾಲೆಯ ಮೆಹಕರನ ದಿಗಂಬರ ತೆಲಂಗ, ತಿಪ್ಪಣ್ಣ ಶಿವಪೂರೆ, ಚನ್ನಬಸಪ್ಪ ಸಿಆರ್‍ಪಿ, ಮಲ್ಲಿಕಾರ್ಜುನ ಹಲಮಂಡಗೆ, ಶ್ರೀಕಾಂತ ಮೂಲಗೆ, ಗೋವಿಂದರಾವ ಬಿರಾದಾರ, ಅಶೋಕಕುಮಾರ ಬಿರಾದಾರ, ವಿರಶೆಟ್ಟಿ ಬಾವುಗೆ ಉಪಸ್ಥಿತರಿದ್ದರು.
ಕಲ್ಯಾಣರಾವ ಸ್ವಾಗತಿಸಿದರು. ಶ್ರಿಕಾಂತ ನಿರೂಪಿಸಿದರು. ಶಿವಶಂಕರ ವಂದಿಸಿದರು.