
(ಸಂಜೆವಾಣಿ ವಾರ್ತೆ)
ಬೀದರ್:ಎ.23: ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭೆಗಳು ಅಡಕವಾಗಿದ್ದು, ಅವರಿಗೆ ಸರಿಯಾದ ಶಿಕ್ಷಣ, ಯೊಗ್ಯ ಉದ್ಯೋಗ ಸಿಗದೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ಸರಿದೂಗಿಸಲು ಬ್ರಿಟನ್ ಮಾದರಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಡು ಹಾಕಿ ಮಾದರಿ ಶಿಕ್ಷಣ ನೀಡುವ ಸಂಕಲ್ಪ ತನ್ನದಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶಿವಕುಮಾರ ಪಾಟೀಲ ಹೇಳಿದರು.
ನಗರದ ಖಾಸಗಿ ಹೋಟಲನಲ್ಲಿ ಸುದ್ದಿಗೋಷ್ಡಿ ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ರಾಜಕೀಯ ಕ್ಷೇತ್ರ ಸಂಪೂರ್ಣ ವಾಣಿಜ್ಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಲಕ್ಷ ಹಣ ಚಲ್ಲಿ ಕೊಟ್ಯಾಧೀಶರಾಗುವ ಮನೋಭಾವ ಎಲ್ಲ ರಾಜಕೀಯ ಧುರಿಣರಲ್ಲಿ ಬಂದು ಬಿಟ್ಟಿದೆ. ಚುನಾವಣೆ ಸಂದರ್ಭದಲ್ಲಿ ರು.500/- ಪಡೆದು ತಮ್ಮ ಮತ ಮಾರಿಕೊಂಡು ಮುಂದಿನ 5 ವರ್ಷ ಅವರ ಮನೆ ಬಾಗಿಲಿಗೆ ಚಕ್ಕರ್ ಹಾಕುವ ಗುಲಾಮಗಿರಿ ನಮ್ಮ ಜನರಲ್ಲಿ ಬಂದು ಬಿಟ್ಡಿದೆ. ಇದು ನಿಲ್ಲಿಸಲು ಮತದಾರರಲ್ಲಿ ಜಾಗೃತಿ ಮೂಡಿಸುವ ಹಾಗೂ ಅದರ ಮಹತ್ವ ತಿಳಿಸುವ ಅಗತ್ಯವಿದೆ ಎಂದರು.
ತಾನು ಈ ದುಷ್ಟ ರಾಜಕೀಯ ನೀತಿ ತೊಲಗಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳಿಗಾಗಿ ಬೀದರ್ ನಗರದಲ್ಲಿ ಏ.ಎ.ಎಸ್, ಏ.ಪಿ.ಎಸ್, ಕೆ.ಎ.ಎಸ್, ಏ.ಎಫ್.ಎಸ್ ತರಬೇತಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ದೇಶದ ಸಮಗೃ ಅಭಿವೃದ್ಧಿ ಶಿಕ್ಷಣದ ಮೇಲೆ ನಿಂತಿದ್ದು, ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.
ಈ ಹಿಂದೆ ಪಶ್ಚಿಮ ಬಂಗಾಳ ಹಾಗೂ ಪಂಜಾಬನಲ್ಲಿ ದಿನಗೂಲಿ ಕಾರ್ಮಿಕರನ್ನು ಗೆಲ್ಲಿಸಿರುವ ಮತದಾರರ ಮಾದರಿಯಲ್ಲಿ ಇಲ್ಲಿಯೂ ಅಂತಹ ವ್ಯವಸ್ಥೆ ಬರಬೇಕಿದೆ. ಹಾಗಿದ್ದಾಗ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಸಮಗೃ ವಿಕಾಸ ನನ್ನ ಪ್ರಥಮಾದ್ಯತೆ ಇರಲಿದೆ ಎಂದು ಶಿವಕುಮಾರ ಪಾಟೀಲ ಸ್ಪಷ್ಡಪಡಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಅಂಬಿಗಾರ, ರಾಜಕುಮಾರ, ಶಶಿಕಾಂತ ಸ್ವಾಮಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.