ಶೈಕ್ಷಣಿಕ ಚಿಂತನ ಮಂಥನಗಳಿಂದ ಜ್ಞಾನವೃದ್ಧಿ

ಬೀದರ:ಜು.30:ಕೋವಿಡ್-19 ಸಾಂಕ್ರಮಿಕ ರೋಗದಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಸಾಕಷ್ಟು ಕೊರತೆ ಕಂಡುಬಂದಿದೆ. ಔಪಚಾರಿಕ ಶಿಕ್ಷಣದಲ್ಲಿ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸುವ ಸಲುವಾಗಿ ಶಿಕ್ಷಣ ಇಲಾಖೆಯು ವಿದ್ಯಾಪ್ರವೇಶ, ಕಲಿಕಾ ಚೇತರಿಕೆ ಉಪಕ್ರಮ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇವುಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಬಾಯಿ ಡಿ. ಅಕ್ಕಿ ಕರೆ ನೀಡಿದರು.

ಅವರು ಬೀದರ ತಾಲ್ಲೂಕಿನ ಕೋಳಾರ (ಕೆ) ವಲಯದ ಗುರುಬಸವ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಶೈಕ್ಷಣಿಕ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಶಿಕ್ಷಣ ಇಲಾಖೆಯ ಕಾರ್ಯ ಯೋಜನೆಗಳು ಫಲಪ್ರದವಾಗಬೇಕಾದರೆ ಶಿಕ್ಷಕರ ಯೋಗದಾನ ಮುಖ್ಯವಾದುದು. ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಶೈಕ್ಷಣಿಕ ಚಿಂತನ ಮಂಥನಗಳಿಂದ ಜ್ಞಾನವೃದ್ಧಿಯಾಗುವುದು ಎಂದು ತಿಳಿಸಿದರು.

ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ಕರೆತಂದು ಅವರಿಗೆಲ್ಲ ಗುಣಾತ್ಮಕ ಶಿಕ್ಷಣ ನೀಡುವುದು, ಕಲಿಕಾ ಹಾಳೆಗಳನ್ನು ಬಳಸಿಕೊಂಡು ನಿರ್ದಿಷ್ಟ ಸಾಮಥ್ರ್ಯಗಳನ್ನು ಪಡೆಯುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಈ ದಿಶೆಯಲ್ಲಿ ಅಧಿಕಾರಿಗಳು, ಶಿಕ್ಷಕರು, ಸಮಾಜದ ಭಾಗಿದಾರರು ಕೈಜೋಡಿಸಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಶಾಲಾ ಹಂತದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಕೆಂದು ಬೀದರ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಾ. ವಿಜಯಕುಮಾರ ವ್ಹಿ. ಬೆಳಮಗಿ ಅಭಿಪ್ರಾಯಪಟ್ಟರು.

ಪ್ರಸ್ತುತ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜು ಸಾಗರ, ಸಿದ್ರಾಮ ಹಿಂದೊಡ್ಡಿ, ಸುಮತಿ ರುದ್ರ, ಸೈಬಣ್ಣ ನಾಲವಾರ ಶೈಕ್ಷಣಿಕ ಚಿಂತನೆಗಳನ್ನು ಹಂಚಿಕೊಂಡರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ದತ್ತು ಸ್ವಾಮಿ, ಸಹಕಾರ್ಯದರ್ಶಿ ಡೇವಿಡ್, ಕ್ಷೇತ್ರ ಸಂಪನ್ಮೂಲ ವ್ಯಕ್ಷಿಗಳಾದ ಮಂಜುನಾಥ ಬಿರಾದಾರ, ತಾನಾಜಿ ಕಾರಬಾರಿ, ಮುಖ್ಯಗುರುಗಳಾದ ಸೈಬಣ್ಣ ನಾಲವಾರ, ಗೌತಮ ವರ್ಮಾ, ನಿರ್ಮಲಾ ಚಂದನಹಳ್ಳಿ, ರೇಣುಕಾದೇವಿ, ಗೀತಾ, ನಿರ್ಮಲಾ ಬೆಲ್ದಾರ, ಸುನಂದಾ ಪಾಟೀಲ, ಅರ್ಜುನ ವರ್ಮಾ, ಚಂದ್ರಕಲಾ ಬೊರೆ, ರೋಹಿತ ಮೈಂದೆ, ದೀಲಿತ ಸಾವಳೆ, ಹಣಮಂತ ಮಂದಕನಳ್ಳಿ, ಸೋಮನಾಥ, ಶಶಿಕಲಾ ಸೇರಿದಂತೆ ಹಲವಾರು ಶಿಕ್ಷಕರು ಭಾಗವಹಿಸಿದ್ದರು.

ನಿರ್ಗಮಿತ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುನೀಲಕುಮಾರ ಗಾಯಕವಾಡರನ್ನು ಬೀಳ್ಕೊಡಲಾಯಿತು. ಡಾ. ರಘುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಓಂ ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷ ರವಿ ಶಂಭು ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ನಾಗಶೆಟ್ಟಿ ಗಾದಗಿ ವಂದನಾರ್ಪಣೆ ಸಲ್ಲಿಸಿದರು.