ಶೈಕ್ಷಣಿಕ ಗುಣಾತ್ಮಕ ವರ್ಷ 2023-24: ಪ್ರಾರಂಭೋತ್ಸವ

ಬೀದರ,ಜೂ.1- ಸರ್ಕಾರಿ ಶಾಲೆ ಮೈಲೂರನಲ್ಲಿ “ಶೈಕ್ಷಣಿಕ ಗುಣಾತ್ಮಕ ವರ್ಷ 2023-2024” ಹಾಗೂ ಶಾಲಾ ಪ್ರಾರಂಭೋತ್ಸವ ನಿಮಿತ್ತ ಮಕ್ಕಳಿಗೆ ಭವ್ಯವಾಗಿ ಸ್ವಾಗತ ಮಾಡಿ ಶಿಕ್ಷಣ ಇಲಾಖೆಯಿಂದ ಉಚಿತವಾಗಿ ಸಮವಸ್ತ್ರ ಮತ್ತು ಪುಸ್ತಕಗಳು ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಗೋರನಾಳಕರ್ ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮೊಹಸಿನ್ ಸರ್ ಪ್ರೌಢ ಶಾಲೆಯ ಮುಖ್ಯಗುರು ರಾಘವೇಂದ್ರ ಕುಲಕರ್ಣಿ, ಸ.ಹಿ.ಪ್ರಾ.ಶಾಲೆಯ ಮುಖ್ಯಗುರು ಬಲವಂತರಾವ ಪಾಂಡ್ರೆ ಶಿಕ್ಷಕ ಶಿಕ್ಷಕಿಯರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು