ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದೇ ನಮ್ಮ ಗುರಿ: ಜಾಬಶಟ್ಟಿ

ಬೀದರ: ನ.7:ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುzಕ್ಕಾಗಿ ಸಂಸ್ಥೆ ಯ ಎಲ್ಲಾ ಶಿಕ್ಷಕ ಹಾಗು ಸಿಬ್ಬಂದಿ ಅವರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲಾಗುವುದು .ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಹೊಸ ಹೊಸ ಯೋಜನೆ ಆಯಾಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಬಸವರಾಜ ಜಾಬಶಟ್ಟಿ ಅವರು ತಿಳಿಸಿದರು. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾz ಬಸವರಾಜ ಜಾಬಶಟ್ಟಿ sಅವರಿಗೆ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ,ಬೀದರ ವತಿಯಿಂದ ಅವರ ಮನೆಗೆ ಹೋಗಿ ಸನ್ಮಾನಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಸನ್ಮಾನ ಹಾಗು ಮನವಿಪತ್ತ ಸ್ವೀಕರಿಸಿ ಅವರು ಮಾತನಾಡುತ್ತ ಶೈಕ್ಷಣೀಕ ಗುಣಮಟ್ಟ ಹೆಚ್ಚಿಸುವುದರಿಂದ ಆರ್ಥಿಕ ಮಟ್ಟವು ಸುಧಾರಣೆಯಾಗುತ್ತದೆ .ಸಂಸ್ಥೆಯ ವತಿಯಿಂದ ಆಯ್.ಎ.ಎಸ್./ಆಯ್.ಪಿ.ಎಸ್.ತರಗತಿಗಳನ್ನು ನಡೆಸಲಾಗುವುದು.ದಿವಂಗತÀ ಆರ್.ವಿ.ಬಿಡಪ, ದಿ.ನಾಗಣ್ನ ಜಾಬಶೆಟ್ಟಿ, ದಿ.ಭೀಮಣ್ಣ ಮಜಗೆ ಅವರಂತೆ ಅನೇಕರು ತಮ್ಮ ನಿಸ್ವಾಥ್ ಸೇವೆಯಿಂದ ಕರಾಶಿ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ.ಅವರ ತತ್ವಾದರ್ಶಗಳನ್ನು ಕಾಪಾಡಿಕೊಂಡು ಸಂಸ್ಥೆಯ ಘನತೆ ಗೌರವ ಹೆಚ್ಚಿಸುವುದು ತಮ್ಮ ಉದ್ದೇಶÀ ಎಂದು ಅವರು ನುಡಿzರು.

ಸಂಘದ ವತಿಯಿಂದ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯಿಸುತ್ತ ಬರುವ ಶೈಕ್ಷಣಿಕ ವರ್ಷ ಕರಾಶಿ ಸಂಸ್ಥೆ ವತಿಯಿಂದ ಚಿmಗುಪ್ಪದಲ್ಲಿ ಪ್ರಾರಂಭಿಸುವ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ “ಗಾನಯೋಗಿ ಪಂಚಾಕ್ಷರ ಗವಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜು ,ಚಿಟಗುಪ್ಪ ” ಎಂದು ನಾಮಕರಣ ಮಾಡುವ ನಿರ್ಣಯ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ತಿಳಿಸಿದರು.

ಪ್ರೊ.ಎಸ್.ವಿ.ಕಲ್ಮಠ ಅವರು ಮಾತನಾಡುತ್ತ ಕರಾಶಿ ಸಂಸ್ಥೆಯ ಆಧಾರ ಸ್ತಂಭವಾಗಿದ್ದ ದಿವಂಗತ ನಾಗಣ್ಣ ಜಾಬಶಟ್ಟಿ ಅವರ ಸುಪುತ್ರರಾದ ಬಸವರಾಜ ಜಾಬಶಟ್ಟಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹಾಗೂ ನಾಡಿನ ಸಮಸ್ತ ಜನತೆಗೆ ಸಂತಸ ಮತ್ತು ಹೆಮ್ಮೆಯನ್ನು ತಂದು ಕೊಟ್ಟಿದೆ. ತಮ್ಮ ಅಧಿಕಾರ ಅವಧಿಯಲ್ಲಿ ಕರಾಶಿ ಸಂಸ್ಥೆ ಇನ್ನೂ ಹೆಚ್ಚಿನ ಸಾಧನೆ ಮಾಡಿ ತನ್ನ ಘನತೆ ಗೌರವವನ್ನು ಹೆಚ್ಚಿಸಲಿದೆ ಎಂದು ಅವರು ತಿಳಿಸಿದರು.

ಪ್ರೊ.ದೇವೇಂದ್ರ ಕಮಲ ಸಂಘದ ಗೌರವಾಧ್ಯಕ್ಷರು ಮಾತನಾಡುತ್ತ ಬಸವರಾಜ ಜಾಬಶಟ್ಟಿ ಅವರಿಗೆ ಅಪಾರ ಶೈಕ್ಷಣೀಕ ಹಾಗು ಆಡಳಿತ ಅನುಭವ ಇದೆ.ಶೈಕ್ಷಣಿಕ ಸುಧಾರಣೆಯ ಕಳಕಳಿವುಳ್ಳವರಾಗಿದ್ದಾರೆ.ಎಲ್ಲರ ಪ್ರೀತಿ,ವಿಶ್ವಾಸ ಹಾಗು ಗೌರವಕ್ಕೆ ಪಾತ್ರರಾಗಿದ್ದಾರೆಂದು ನುಡಿದರು.ಅವರ ನೇತ್ರತ್ವದಲ್ಲಿ ಕರಾಶಿ ಸಂಸ್ಥೆ ಪ್ರಗತಿ ಸಾಧಿಸಲಿದೆ ಎಂದರು.

ಕೋಶಾಧ್ಯಕ್ಷರಾದ ಡÀÁ.ಬಿ.ಎಸ್.ಬಿರಾದಾರ, ಸಹ ಕಾಂiÀರ್iದರ್ಶಿ ಧನರಾಜ ಸ್ವಾಮಿ ,ನಿರ್ದೇಶಕರಾದ ಸುರೇಶ ಚಿಟಗುಪಕರ್, ಮುರಲಿ ನಾಶಿ, ವೀರಭದ್ರಪ್ಪ ಉಪ್ಪಿನ ಉಪಸ್ಥಿತರಿದ್ದರು.