ಶೈಕ್ಷಣಿಕ ಕ್ಷೇತ್ರ ಅಭಿವೃದ್ದಿ ಹೊಂದಿದಾಗ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯ

(ಸಂಜೆವಾಣಿ ವಾರ್ತೆ)
ಚಿತ್ತಾಪೂರ:ಮೇ.14: ಶಿಕ್ಷಣ ಪಡೆದುಕೊಂಡ ಯುವಕರು ಈ ದೇಶಕ್ಕೆ ಸುಭದ್ರ ಅಡಿಪಾಯವಾಗುತ್ತಾರೆ. ಹಾಗಾಗಿ ತಾವು ಶಿಕ್ಷಣಕ್ಕೆ ಅತಿ ಹೆಚ್ಚಿನ ಒತ್ತು ನೀಡಿದ್ದು ಚಿತ್ತಾಪುರ ಹೊರ ವಲಯದಲ್ಲಿ ನಾಗಾವಿ ಶೈಕ್ಷಣಿಕ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲ ಮಾಡಿಕೊಲಾಗಿದೆ ಎಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿದರು.
ಮಲಕೂಡ ಗ್ರಾಮದಲ್ಲಿ ನಬಾರ್ಡ-25 ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ರೂ 48 ಲಕ್ಷ ಮೊತ್ತದಲ್ಲಿ ನಿರ್ಮಿಸಿದ ಶಾಲಾ ಕೋಣೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿ ಮೂಡಿಸುವಲ್ಲಿ ಪೆÇೀಷಕರ ಪಾತ್ರ ಹಿರಿದಾಗಿದೆ ಎಂದು ಅಭಿಪ್ರಾಯಪಟ್ಟ ಶಾಸಕರು ಮಕ್ಕಳನ್ನು ಜಾಗೃತರನ್ನಾಗಿ ಮಾಡಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು ಅಂದಾಗ ಮಾತ್ರ ಒಂದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವುದು ಹೇಗೆ ಮುಖ್ಯವೋ ಶಾಲೆ ಕೋಣೆ ರಕ್ಷಿಸುವುದು ಕೂಡಾ ಅಷ್ಟೇ ಮುಖ್ಯ ಇಲ್ಲದೇ ಹೋದರೆ ಕಿಡಿಗೇಡಿಗಳು ಶಾಲಾ ಆವರಣವನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿದರು
ರಾಜ್ಯ ಸರ್ಕಾರದ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ ಶಾಸಕರು, ನನ್ನ ಕ್ಷೇತ್ರದ ಅಭಿವೃದ್ದಿಗೆ ಬೇಕಾಗುವ ಅನುದಾನ ನೀಡುತ್ತಿಲ್ಲ. ಸರ್ಕಾರದ ವಿರುದ್ದ ಮಾತಮಾಡಿದ್ದಕ್ಕೆ ನನಗೆ ಈ ಬಹುಮಾನ ನೀಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಅಕ್ರಮ ಪಿಎ??? ನೇಮಕಾತಿಯಲ್ಲಿ ನಡೆದಿರುವ ಹಗಣರವನ್ನು ಹೊರಗಡೆ ತಂದಿರುವುದಕ್ಕೆ ಸಿಐಡಿಯವರು ನನಗೆ ನೋಟಿಸು ನೀಡಿದ್ದಾರೆ. 57,000 ಯುವಕರ ಭವಿಷ್ಯದ ವಿಚಾರದಲ್ಲಿ ಸರ್ಕಾರ ಗಂಭೀರತೆ ಪ್ರದರ್ಶನ ಮಾಡುತ್ತಿಲ್ಲ ಎಂದು ಹೇಳಿದರು.
ಅಭಿವೃದ್ದಿ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಮೀರಿಸುವಂತ ಮತ್ತೊಬ್ಬ ಶಾಸಕರಿಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ, ತಮ್ಮ ಪಕ್ಷದ ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಠಕಲ್ ಅಭಿವೃದ್ದಿ ಪಡಿಸಿರುವುದನ್ನ ನೋಡಿಕೊಂಡು ನಿಮ್ಮ ಕ್ಷೇತ್ರಗಳ ಅಭಿವೃದ್ದಿ ಮಾಡಿ ಎನ್ನುತ್ತಿದ್ದರು. ಈಗ ಅದೇ ರೀತಿ ಅವರ ಖರ್ಗೆ ಅವರ ಮಗ ಪ್ರಿಯಾಂಕ್ ಅವರು ಕೂಡಾ ಚಿತ್ತಾಪುರ ಕ್ಷೇತ್ರದಲ್ಲಿ ಅಭಿವೃದ್ದಿ ಹೊಳೆಯನ್ನೇ ಹರಿಸುತ್ತಾರೆ ಹಾಗಾಗಿ ಇತರೇ ಪಕ್ಷದ ಶಾಸಕರು ಚಿತ್ತಾಪುರ ನೋಡಿಕೊಂಡು ಹೋಗಲಿ ಎಂದು ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಸಲಹೆ ನೀಡಿದರು.
ಮಲಕೂಡ-ತೊಣಸನಹಳ್ಳಿ ನಡುವೆ ರಸ್ತೆ. ಹರಿಜನವಾಡದಿಂದ ಕೊನೆಯ ಮನೆಯವರೆಗೆ ಪೈಪ್ ಲೈನ್, ಶಾಲೆಯ ಮೇಲೆ ಸೋಪಾನ ಸ್ಥಾಪನೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಸಲ್ಲಿಸಿದರು. ಆಗ ಪ್ರತಿಕ್ರಿಯಿಸಿದ ಶಾಸಕರು ತೊಣಸನಹಳ್ಳಿ ರಸ್ತೆ ಮಾಡುತ್ತೇನೆ. ಆದರೆ ಶೌಚಾಲಯ ನಿರ್ಮಾಣಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದರು.
ಈ ಸಂದರ್ಭದಲ್ಲಿ ತಿಪ್ಪಣ್ಣಪ್ಪ ಕಮಕನೂರು, ಜಗನಗೌಡ ಪಾಟೀಲ ರಾಮತೀರ್ಥ, ರಮೇಶ ಮರಗೋಳ, ಸಿದ್ದುಗೌಡ ಪಾಟೀಲ್, ಶಿವರುದ್ರ ಭೇಣಿ, ಮಲ್ಲಪ್ಪ ಹೊಸಮನಿ, ಮನ್ಸೂರ್ ಪಟೇಲ, ರಾಜಶೇಖರ ತಿಮ್ಮಾನಾಯಕ, ಸೇರಿದಂತೆ ಅನೇಕ ಇದ್ದರು.