ಶೈಕ್ಷಣಿಕ ಕ್ಷೇತ್ರಕ್ಕೆ ಸರಕಾರದ ಜೊತೆಗೆ ಸಮುದಾಯದ ಸಹಕಾರ ಅಗತ್ಯ: ಅತ್ತಾರ

ಅಫಜಲಪುರ:ಮಾ.26: ಸರಕಾರದ ಜೊತೆಗೆ ಸಮುದಾಯದ ಸಹಕಾರ ದಾನಿಗಳು ದೇಣಿಗೆ ನೀಡಿದಾಗ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಸಮಾಜ ಕಾರ್ಯಕರ್ತ, ಹಿತಚಿಂತಕ ಹಾಗೂ ಹಿರಿಯ ಪತ್ರಕರ್ತ ಆರ್ (ರಾಜು) ಎಸ್ ಅತ್ತಾರ ನುಡಿದರು.

ತೆಗ್ಗೆಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ನೂತನ ಎಸ್.ಡಿ.ಎಂ.ಸಿ ರಚನೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಹಾಗೂ ಒಂದು ದಿನದ ಕಾರ್ಯಾಗಾರ ಸೈನಿಕ ವಿಠ್ಠಲ ಬಾಪು ಪಾಂಡರೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಶಾಲೆಗೆ ದಾಖಲಾತಿಯಲ್ಲಿ ಎಸ್.ಡಿ.ಎಂ.ಸಿ ಪಾತ್ರ ಬಹುಮುಖ್ಯವಾಗಿದೆ ಎಂದು ನೂತನ ಎಸ್.ಡಿ.ಎಂ.ಸಿ ಗಮನಕ್ಕೆ ತರುತ್ತಾ, ಕೃಷಿ ಕುಟುಂಬದ ಯಜಮಾನರೊಬ್ಬರು ಹಳ್ಳಿ ಶಾಲೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತುಂಬಾ ಸಂತಸ ತಂದಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಸಿ.ಆರ್.ಸಿ ಸಂತೋಷ ಬಿರಾದಾರ ಮಾತನಾಡಿ, ಎಸ್.ಡಿ.ಎಂ.ಸಿ ರಚನೆ ಉದ್ದೇಶ ಕರ್ತವ್ಯಗಳ ಬಗ್ಗೆ ಕಾರ್ಯಾಗಾರದಲ್ಲಿ ಸದಸ್ಯರನ್ನು ಉದ್ದೇಶಿಸಿ ಸಂಭೋದಿಸಿ ಮಾತನಾಡಿದರು.

ಸೈನಿಕ ವಿಠ್ಠಲ ಪಾಪು ಪಾಂಡರೆ ಸರಸ್ವತಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ತಾಲೂಕಾ ಪಂಚಾಯತ ಸದಸ್ಯರ ಗುರಣ್ಣಾ ಜಮಾದಾರ ಜ್ಯೋತಿ ಬೆಳಗಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಲಕ್ಷ್ಮಣ ಜೋಗುರ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸರಕಾರದಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಕಲ್ಪಿಸಲು ಶ್ರಮ ವಹಿಸುವುದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸನ್ಮಾನ ಸಮಾರಂಭದಲ್ಲಿ ಶಿಕ್ಷಣ ಪ್ರೇಮಿ ಸಂಜಯ್ ಹೆಚ್ ಸಾಹು, ರಾಜು ನಡಗೇರಿ, ಮಡಿವಾಳಪ್ಪ ಪಾಟೀಲ, ಚಿದಾನಂದ ಪಡವಳಕರ, ಶಿವಶಂಕರ ಬೆನಕನಳ್ಳಿ, ಹಸನಪ್ಪ ಭಂಟನೂರ, ಖಾಜಪ್ಪ ಜಮಾದಾರ, ನೂರಂದ ತಳವಾರ, ಕಾಂತಪ್ಪ ಚೋರಮುಲೆ, ಲಕ್ಷ್ಮೀಕಾಂತ ತರ್ಗೆ, ಮಹಾಂತ ಸೋಲಾಪೂರ, ನಾಗರಾಜ ಚೋರಮುಲೆ, ದತ್ತು ಪಾಟೀಲ ಮಣ್ಣೂರ, ಶ್ರೀಶೈಲ ಜಮಾದಾರ, ಅಲಾವುದ್ದೀನ ಮುಜಾವರ ಗ್ರಾಮದ ಗಣ್ಯರು, ಪಾಲಕರು, ಪೋಷಕರು, ಬಿಸಿಯೂಟದ ಸಿಬ್ಬಂದಿಯವರು ಪಾಲ್ಗೊಂಡಿದ್ದು, ಸಹ ಶಿಕ್ಷಕ ಲಕ್ಷ್ಮಣ ದೇವಣಗಾಂವ ಸ್ವಾಗತಿಸಿ, ನಿರೂಪಿಸಿದರು.