ಶೈಕ್ಷಣಿಕ ಕ್ರಾಂತಿಗೆ ಬಂಥನಾಳದ ಶ್ರೀಸಂಗನಬಸವ ಶಿವಯೋಗಿಗಳ ಕೊಡುಗೆ ಅಪಾರ

ಇಂಡಿ:ಜ.9: ವಿಜಯಪೂರ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಬಂಥನಾಳದ ಶ್ರೀಸಂಗನಬಸವ ಶಿವಯೋಗಿಗಳ ಕೊಡುಗೆ ಸಾಕಷ್ಟು. ಇಡೀ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಶೈಕ್ಷಣಿಕ ಜ್ಞಾನದಾಸೋಹ ನೀಡಿದರೆ. ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಅಧ್ಯಾತ್ಮಿಕ ಜ್ಞಾನದ ದಾಸೋಹ ಉಣಬಡಿಸಿ ಜಿಲ್ಲೆಯಲ್ಲಿ ಜನರನ್ನು ಪಾವನಗೋಳಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಏಂಜಿಲ್ಸ ಆಂಗ್ಲಮಾಧ್ಯಮ ಪ್ರಾ.ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಂಸ್ಕøತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಜಯಪೂರ ಜಿಲ್ಲೆ ಸಂತ ಮಹಾಂತರ ನೆಲೆ ಬೀಡು ಜ್ಞಾನ ದಾಸೋಹಿ ನಡೇದಾಡುವ ದೇವರಾದ ಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕೃತಿ, ನಿಸರ್ಗ ಸಸ್ಯಸಂಕುಲಗಳನ್ನು, ಸಕಲ ಜೀವನರಾಸಿಗಳ ಮೇಲೆ ಸಾಕಷ್ಟು ಪ್ರೀತಿ. ಅನುಕಂಪ ಮಾತೃ ವಾತ್ಸಲ್ಯದಿಂದ ಕಾಣುತ್ತಿದ್ದರು. ಪ್ರಕೃತಿಯಲ್ಲಿ ದೇವರನ್ನು ಕಾಣಿ ಎಂದು ಸದಾ ಭಕ್ತರಿಗೆ ಸಂದೇಶ ನೀಡುತ್ತಿದ್ದರು ಇಂತಹ ಮಹಾತಪಸ್ವೀಗಳ ದಾರ್ಶನಿಕ ಪುಣ್ಯ ಪುರುಷರ ಜಿಲ್ಲೆಯಲ್ಲಿ ನಾವೇಲ್ಲಾ ಜನಸಿರುವುದೇ ನಮ್ಮೇಲ್ಲರ ಭಾಗ್ಯ.

ಈ ಸಂಸ್ಥೆಗೂ ನನಗೂ ಸಾಕಷ್ಟು ನಂಟು ಗಡಿ ಭಾಗದಲ್ಲಿ ಈ ಹಿಂದೇ ಒಂದೂ ಶಿಕ್ಷಣ ಸಂಸ್ಥೆಗಳಿರಲ್ಲಿಲ್ಲ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡಿದ ಎಂ.ಡಿ ಶಿರೋಮಣಿಯವರ ಸಾಮಾಜಿಕ ಕಳಕಳಿ ದೂರದೃಷ್ಠಿ ಮೆಚ್ಚುವಂತಹದ್ದು .ಇಂಗ್ಲೀಷ ಕಗ್ಗಂಟಾಗಿರುವ ದಿನಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಿದ ಏಕೈಕ ಸಂಸ್ಥೆ ಇದಾಗಿದೆ. ಪ್ರಪಂಚದ ಯಾವುದೇ ದೇಶಗಳಿಗೆ ಹೋದರೆ ಇಂಗ್ಲೀಷ ಭಾಷೆ ಪ್ರಮುಖವಾಗಿದೆ. ನಿಮ್ಮ ತಾಯಿ ಭಾಷೆಯನ್ನು ಪ್ರೀತಿಸಿ ಬೇರೆ ಭಾಷೆಯನ್ನು ಗೌರವಿಸಿ ಎಂದು ಸಲಹೆ ನೀಡಿದರು.

ಬಾಕ್ಸ: ಅಧ್ಯಾತ್ಮಿಕ ಲೋಕದ ದೃವತಾರೆ ನಡೇದಾಡುವ ದೇವರು ಪ್ರಕೃತಿಯ ಆರಾಧಕ .ಗಿಡ,ಮರ ನದಿ, ಸರೋವರ, ಮೇಘರಾಜ ಇಡೀ ನಿಸರ್ಗ ಪ್ರತಿಯಿಂದ ಕಂಡು ನಿಸರ್ಗದಲ್ಲಿ ದೇವರನ್ನು ಕಾಣಿ ಎಂದು ಸದಾ ಹಿತನುಡಿಗಳಾಡುತ್ತಿದ್ದ ವಿಜಯಪೂರ ಜ್ಞಾನ ಯೋಗಾಶ್ರಮದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ವಾಣಿಯನ್ನು ಶರಣಬಸಪ್ಪಾ.ಕಾಂಬಳೆ ಕಾರ್ಯಕ್ರಮ ನೀರೂಪಿಸುವಾಗ ಮೋಡವೂ ಇಲ್ಲ ಗಾಳಿಯೂ ಇಲ್ಲ ಎತನ್ಮಧ್ಯ ಶ್ರೀಸಿದ್ದೇಶ್ವರರ ಕೃಪೆಯಂತೆ ಒಮ್ಮಿಂದೋಮಿಲ್ಲೆ ಎಲ್ಲಿಲ್ಲದ ಮೇಘರಾಜನ ದರ್ಶನವಾದಂತೆ ಧರೆಗೆ ಮಳೆ ಬಂದು ಸೇರಿದ ಸಾವಿರಾರು ಪಾಲಕರಿಗೆ ವೇದಿಕೆಯ ಗಣ್ಯರಿಗೆ ಪವಾಡ ನಡೇದಿರುವುದರಿಂದ ದಿಗ್ಬ್ರಮೆಯಾಯಿತ್ತು. ನಂತರ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳಿಗೆ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ್ಯ ಮೌನಾಚರಣೆ ಮಾಡಲಾಯಿತು.

ವಿಜಯಪೂರ ಜಿಲ್ಲಾ ಕ್ರೈಸ್ಟ ನಾಯಕರ ಸಂಘ ಜಿಲ್ಲಾ ಅಧ್ಯಕ್ಷ ಕ್ರಿಸ್ಟೋಫರ್ ವಿಲಿಯಂ ದಿವ್ಯ ಸಾನಿಧ್ಯವಹಿಸಿದರು.

ಸಂಸ್ಥೆಯ ಅಧ್ಯಕ್ಷ ಡಿ.ಶಿರೋಮಣಿ, ಕಾರ್ಯದರ್ಶಿ ಸ್ಟೀಫನ್ ಶಿರೋಮಣಿ, ಪತ್ರಕರ್ತ ಶರಣಬಸಪ್ಪ ಕಾಂಬಳೆ, ಪ್ರಾಚಾರ್ಯ ಆಯ್.ಸಿ ಪೂಜಾರಿ, ಆನಂದ ಚವ್ಹಾಣ, ಮಹಮ್ಮದಗೌಸ ಬಗಲಿ,  ಬಿ.ಎನ್ ಮಾಕಪ್ಪನನಹಳ್ಳಿ, ಮಂಜುನಾಥ ನಾಯಕೋಡಿ,  ಮಲ್ಲು ಕೋರಣ್ಣವರ್, ಲಕ್ಷ್ಮೀ ಗೌರೀಶ, ಎಸ್.ಬಿ ಗದ್ಯಾಳ, ಆನಂದ ಕಾಂಬಳೆ,ಇಮ್ರಾನ್ ಮುಜಾವರ  ಸೇರಿದಂತೆ ಶಿಕ್ಷಕರು ಸಿಬ್ಬಂದ್ದಿ ಉಪಸ್ಥಿತರಿದ್ದರು.