ಶೈಕ್ಷಣಿಕ ಕಾಳಜಿಯ ಬದ್ದತೆಯಿಂದ  ಪರಿಪೂರ್ಣತೆ ಸಾಧ್ಯ

ದಾವಣಗೆರೆ.ಜು.27;ಶೈಕ್ಷಣಿಕ ಕಾಳಜಿಯ ಬದ್ದತೆ ಪೋಷಕರು, ಶಿಕ್ಷಕರ ಅಂತರಾಳದಿಂದ ಇಚ್ಛಾಶಕ್ತಿಯಿಂದ ತೊಡಗಿಕೊಂಡು ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಶಿಕ್ಷಣದ ಸಾಧನೆಗೆ ಪರಿಪೂರ್ಣತೆ ಬರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಕೆಲವರಲ್ಲಿ ಸಾಮಾನ್ಯ ಜ್ಞಾನದ ಕೊರತೆಯಿಂದ ಬಾಳು ಬರಡಾಗುತ್ತದೆ. ಮಕ್ಕಳ ಸಾಧನೆಗೆ ಉತ್ತಮ ವಿದ್ಯಾರ್ಚನೆ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ಅಳವಡಿಸಿಕೊಂಡಾಗ ಶಿಕ್ಷಣದ ಮಾಲ್ಯ ಹೆಚ್ಚುತ್ತದೆ. ಮಕ್ಕಳ ವಿದ್ಯಾರ್ಚನೆಯ ಪದವಿ, ರ‍್ಯಾಂಕ್, ಅಂಕಪಟ್ಟಿ ಮಾನದಂಡವಲ್ಲ ಇತ್ತೀಚಿನ ಪರಿಸ್ಥಿತಿಯಲ್ಲಿ ಕೆಲವು ಮಹಿಳೆಯರು ಟಿ.ವಿ, ಧಾರವಾಹಿಗಳಲ್ಲಿ ಮುಳುಗಿ ಮಕ್ಕಳ ಬಗ್ಗೆ ಕಾಳಜಿಯನ್ನು ಮರೆತು ಮಕ್ಕಳ ಭವಿಷ್ಯ ಹಾಳಾಗುತ್ತಿರುವುದು ನಗ್ನ ಸತ್ಯ ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಮ್ಮ ಅಂತರಾಳ ಭಾವನೆಗಳನ್ನು ಹಂಚಿಕೊAಡರು.ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಎಲೆಬೇತೂರು ಶಾಖೆ ಮತ್ತು ಶ್ರೀ ವಿನಾಯಕ ಕಾನ್ವೆಂಟ್ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಎಲೆಬೇತೂರಿನ ಶ್ರೀ ವಿನಾಯಕ ಕಾನ್ವೆಂಟ್ ಸಭಾಂಗಣದಲ್ಲಿ ನಡೆದ ಶಿಕ್ಷಕರಿಗೆ, ಪೋಷಕರಿಗೆ ಕೆಲವು ಸಲಹೆ ಸೂಚನೆಯೊಂದಿಗೆ ಮಾರ್ಗದರ್ಶನ ಮಾಡಿ ಶೈಕ್ಷಣಿಕ ಕಾಳಜಿಯ ಕುರಿತು ಕಾರ್ಯಾಗಾರ ಸಮಾರಂಭವವನ್ನು ಉದ್ಘಾಟಿಸಿ ಶೆಣೈ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆಯ ರೆಡ್‌ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ರವಿಕುಮಾರ್, ದಾವಣಗೆರೆಯ ಪ್ರೇರಣಾ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಚೇತನ ಶಿವಕುಮಾರ್ ಮಾತನಾಡಿ, “ಪೋಷಕರು, ಸಂಸ್ಕೃತಿ, ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡರೆ ಮಕ್ಕಳೂ ಅದೇ ದಾರಿಯಲ್ಲಿ ಮುಂದುವರಿದು ಮುಂದೆ ಒಳ್ಳೆಯ ಸಾಧಕರಾಗುತ್ತಾರೆ’’ ಎಂದರು.ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಎಲೆಬೇತೂರು ಶ್ರೀ ವಿನಾಯಕ ಕಾನ್ವೆಂಟ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಕೆ.ಎಸ್.ಪರಮೇಶ್ವರಪ್ಪ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ವಾಣಿಜ್ಯವಾಗಿ ಪರಿವರ್ತನೆಯಾಗುತ್ತಿರುವುದು ವಿಷಾದದ ಸಂಗತಿ. ಮಕ್ಕಳ ಭವ್ಯ ದಿವ್ಯ ಭವಿಷ್ಯದ ಕುರಿತು ಚಿಂತನೆಯೊAದಿಗೆ ಪಾರದರ್ಶಕವಾಗಿ ಕಾಯಕದಲ್ಲಿ ತೊಡಗಿಸಿಕೊಂಡು ಮುನ್ನಡೆದರೆ ಶಿಕ್ಷಣ ಸಂಸ್ಥೆಯ ಘನತೆ ಗೌರವ ಹೆಚ್ಚುತ್ತದೆ ಮತ್ತು ಅದಕ್ಕೆ ಸಾರ್ಥಕತೆ ಬರುತ್ತದೆ ಎಂದರು.ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕಿ ಸೌಜನ್ಯರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶಿಕ್ಷಕಿ ನಾಗರತ್ನ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಪೋಷಕರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊAಡು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಪರಮೇಶ್ವರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಪ್ರಸ್ತಾವನೆಯಾಗಿ ಮಾತನಾಡಿ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿ ವಿವರಿಸಿದರು. ಕೊನೆಯಲ್ಲಿ ಶಿಕ್ಷಕಿ ಸುಧಾ ವಂದಿಸಿದರು.

Attachments area