ಶೈಕ್ಷಣಿಕ ಉತ್ತೇಜನಕ್ಕೆ ಧರ್ಮಸ್ಥಳ ಸಂಸ್ಥೆ ಕೊಡುಗೆ ಮಹತ್ತರ: ಅರಳಿ

ಬೀದರ:ನ.10: ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಉತ್ತೇಜನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹತ್ತರ ಪಾತ್ರ ವಹಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಹೇಳಿದರು.
ನಗರದ ಪಾಪನಾಶ ಗೇಟ್ ಒಳಗಡೆಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನತಾಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣದಲ್ಲಿ ತಂತ್ರಜ್ಷಾನದ ಪಾತ್ರ ಹೆಚ್ಚಾಗಿರುವುದನ್ನು ಮನಗಂಡು ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಬ್ಸಿಡಿ ದರದಲ್ಲಿ ಲ್ಯಾಪ್‍ಟ್ಯಾಪ್ ಮತ್ತು ಟ್ಯಾಬ್ ಒದಗಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಯೋಜನೆಯ ಯೋಜನಾಧಿಕಾರಿ ಸಿದ್ಧಾರೂಢ ಮಾತನಾಡಿ, ಶ್ರೀ ಧರ್ಮಸ್ಥಳ ಯೋಜನೆ ಜಿಲ್ಲೆಗೆ ಬಂದು ಐದು ವರ್ಷಗಳು ಬಂದಿದ್ದು, ಯೋಜನೆಯಿಂದ ಬಡ ಕುಟುಂಬಗಳಿಗೆ ನಿರ್ಗತಿಕ ಮಾಶಾಸಾನ, ಕೆರೆ ಪುನಶ್ಚೇತನ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕನ್ನಡ ಮಾಧ್ಯಮದಲ್ಲಿ 5ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಬ್ಸಿಡಿ ದರದಲ್ಲಿ ಟ್ಯಾಬ್ ಮತ್ತು ಲ್ಯಾಪಟ್ಯಾಪ್ ವಿತರಿಸಲಾಗುತ್ತಿದೆ. ಸಂಸ್ಥೆ ಧರ್ಮದರ್ಶಿ ಡಾ.ಡಿ.ವಿರೇಂದ್ರ ಹೆಗಡೆ ಒಂದೇ ಬಾರಿಗೆ 20ಸಾವಿರ ಟ್ಯಾಬ್ ಮತ್ತು 10 ಸಾವಿರ ಲ್ಯಾಪಟ್ಯಾಪ್ ವಿತರಿಸಿದ್ದಾರೆ. ಇದರ ಸದುಪಯೋಗವನ್ನು ಸಂಘಗಳ ಸದಸ್ಯರು ಉಪಯೋಗಿಸಿಕೊಳ್ಳುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ವಿಠಲ್ ನಿರೂಪಿಸಿದರು. ಯೋಜನಾಧಿಕಾರಿ ರಮೇಶ್ ಸಿ ಸ್ವಾಗತಿಸಿದರು. ಮೇಲ್ವಿಚಾರಕ ಮಹಾಂತೇಶ್ ಎಂಡಿ ವಂದಿಸಿದರು.
ವೇದಿಕೆ ಮೇಲೆ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಂಜುಕುಮಾರ್, ಪತ್ರಕರ್ತ ಶಿವಶರಣಪ್ಪಾ ವಾಲಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಪತ್ರಕರ್ತ ಸಂಘದ ಅಧ್ಯಕ್ಷ ಅಶೋಕಕುಮಾರ್ ಕರಂಜಿ, ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ಸಿಪಿಐ ಮಲ್ಲಮ್ಮಾ ಚೌಬೆ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ರುಕ್ಮಿಣಿ, ಸ್ವಸಹಾಯ ಸಂಘದ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.