ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಕಲಬುರಗಿ ನಗರ ಉತ್ತಮ ದಾಪುಗಾಲು: ಡಾ. ಬರ್ಧುಮನ್ ರಾಮಯ್ಯ

ಕಲಬುರಗಿ:ನ.5: ರಾಜ್ಯದಲ್ಲಿ ಕಲಬುರಗಿ ಶರವೇಗದಲ್ಲಿ ಬೆಳೆಯುತ್ತಿರುವ ಮುಂಚೂಣಿ ನಗರವಾಗಿದ್ದು, ಇಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ದಾಪುಗಾಲು ಇಡುತ್ತಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಡಾ. ಬರ್ಧುಮನ್ ರಾಮಯ್ಯ ಅವರು ಹೇಳಿದರು
ನಗರದ ಅಜಾದಪುರ ರಸ್ತೆಯ ವೇದಾ ಪಬ್ಲಿಕ್ ಸಿಬಿಎಸ್‍ಇ ಶಾಲೆಯಲ್ಲಿ ಒಂದರಿಂದ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ವಿಜ್ಞಾನ ಮತ್ತು ಕಲಾ ಪ್ರದರ್ಶನ (ಕಲ್ಪನೆಯು ಮಾನವನ ಪ್ರತಿಯೊಂದು ಸಾಧನೆ ಮೂಲ) ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಸೌಕರ್ಯಗಳಿರಬಹುದು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ, ಸಂಶೋಧನೆ, ಆವಿಷ್ಕಾರಗಳಿಗೆ ಹೆಚ್ಚು ಒತ್ತು ಕೊಟ್ಟಿರುವ ವೇದಾ ಪಬ್ಲಿಕ್ ಶಾಲೆಯು ಉತ್ತಮ ಕಲಿಕಾ ವಾತಾವರಣ ಮೈಗೂಡಿಸಿಕೊಂಡಿದೆ. ಈ ದಿಸೆಯಲ್ಲಿ ಆಡಳಿತ ಮಂಡಳಿಯು ಉತ್ಕøಷ್ಟ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿರುವುದಕ್ಕೆ ಕಲಾ ಪ್ರದರ್ಶನ ತಾಜಾ ನಿದರ್ಶನ ಎಂದು ಬಣ್ಣಿಸಿದರು.
ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿರುವ ಸೌರ ವಿದ್ಯುತ್ ಬಳಕೆ, ಹನಿ ನೀರಾವರಿ, ಪರಿಸರ ಸಂರಕ್ಷಣೆ ಹೀಗೆ ಅನೇಕ ತರಹೇವಾರಿ ಪ್ರಾತಕ್ಷಿಕೆಗಳು ಪೋಷಕರು, ಪಾಲಕರು ನೋಡಿ ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಪ್ರಸ್ತುತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ರಾಜಶ್ರೀ ಪಾಲಾದಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾಶ್ ರಾಠೋಡ್, ವೇದಾ ಪಬ್ಲಿಕ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಆರತಿ ಆರ್. ಮಲ್ಲಶೆಟ್ಟಿ, ಶಾಲೆಯ ಕಾರ್ಯದರ್ಶಿ ಡಾ. ರವಿ ಮಲ್ಲಶೆಟ್ಟಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.