ಶೈಕ್ಷಣಿಕ ಅಧಿಕಾರಿ ವೃಷಬೆಂದ್ರಯ್ಯ ನಿಯೋಜಿತ ಸ್ಥಳಕ್ಕೆ ವರ್ಗಾವಣೆಗೆ ಒತ್ತಾಯ

ರಾಯಚೂರು,ಆ.೧೦-
ಜಿಲ್ಲೆಯ ಕ್ಷೇತ್ರ ಶೈಕ್ಷಣಿಕ ಅಧಿಕಾರಿ ವೃಷಬೆಂದ್ರಯ್ಯ ಇವರ ಅಧಿಕಾರ ಅವಧಿಯಲ್ಲಿ ಅವ್ಯವಹಾರ ವರ್ಗಾವಣೆ ದಂಧೆಯ ಮೂಲಕ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿರುವ ಇವರನ್ನು ಜಿಲ್ಲೆಯಿಂದ ವರ್ಗಾವಣೆ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಭ್ರಷ್ಟಾಚಾರದಲ್ಲಿ ತೊಡಗಿರುವ ಇವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಹಾಗೂ ಕಳೆದ ೧೫ ದಿನಗಳ ಹಿಂದೆ ಇವರು ವರ್ಗಾವಣೆ ಆದೇಶ ಆದರೂ ಇದುವರೆಗೂ ನಿಯೋಜಿತ ಸ್ಥಳಕ್ಕೆ ಹೋಗದೇ ಕಚೇರಿಯಲ್ಲಿ ಭ್ರಷ್ಟಾಚಾರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶೈಕ್ಷಣಿಕ ಅಧಿಕಾರಿ ವೃಷಬೇಂದ್ರಯ್ಯ ಇವರನ್ನು ಜುಲೈ ೭ ೨೦೨೩ ರಂದು ಯಾದಗಿರಿ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶಿಸಿದರು. ನಿಯೋಜನೆಗೊಂಡ ಸ್ಥಳಕ್ಕೆ ಹೋಗದೇ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ಡಯಟ್ ಪ್ರಾಂಶುಪಾಲರಾದ ಶೈಲಪ್ಪ ಶಾಂತಪ್ಪ ಇವರು ವರ್ಗಾವಣೆ ಆದೇಶ ಬಂದ ೧೨ ಗಂಟೆಯೊಳಗೆ ವರ್ಗಾವಣೆಯಾದ ಕೊಪ್ಪಳ ಡಿ.ಡಿ.ಪಿ.ಐ. ಹುದ್ದೆ ಅಲಂಕಾರಿಸಿದ್ದಾರೆ.
ರಾಯಚೂರಿನ ಅತ್ಯಂತ ಕಡುಭ್ರಷ್ಟ ಶಿಕ್ಷಣ ಅಧಿಕಾರಿ ಇಲ್ಲಿಯ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸುಲುಗೆ ಮಾಡುತ್ತಾ ಸರಕಾರಿ ಶಾಲೆಗಳಿಗೆ ವಿಸಿಟ್ ಮಾಡಿ ಶಿಕ್ಷಕರಿಂದ ಹಣ ಪಡೆಯಲು ಗೂಮಾನಿ ಇವರ ಮುಂದೆ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗೆ ಸರಿಯಾಗಿ ಆರ್.ಟಿ.ಇ. ಅನುದಾನ ನೀಡಿರುವುದಿಲ್ಲ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ದುಡ್ಡು ಕೊಟ್ಟರೇ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ದೂರಿದರು.
ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಇತನ ವಿರುದ್ಧ ಪತ್ರಿಕಾ ಗೋಷ್ಠಿಯನ್ನು ಕೆಲ ದಿನಗಳ ಹಿಂದೆ ಮಾಡಿದ್ದಾರೆ. ಹಣದ ಆಸೆಗೆ ಬಿದ್ದ ಈತ ಜಿಲ್ಲೆಯನ್ನು ಬಿಟ್ಟು ವರ್ಗಾವಣೆ ಸ್ಥಳಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾನೆ. ಆದ್ದರಿಂದ ಇವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್. ಶಿವಕುಮಾರ ಯಾದವ, ರವಿಕುಮಾರ, ಕರುಣಾಕರರೆಡ್ಡಿ, ಎನ್. ಗೋವಿಂದ ರಾಜು ಸೇರಿದಂತೆ ಉಪಸ್ಥಿತರಿದ್ದರು.