ಶೇ100ರಷ್ಟು ಫಲಿತಾಂಶ

ಗುಳೇದಗುಡ್ಡ ನ.25- ಸಮೀಪದ ಸೂಳೇಭಾವಿಯ ಪ್ರತಿಷ್ಠಿತ ಶ್ರೀ ರಾಮಯ್ಯಸ್ವಾಮಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2022-23ನೇ ಸಾಲಿನ ಪ್ರಥಮ ವರ್ಷದ ಅಂತಿಮ ಪರೀಕ್ಷೆಯಲ್ಲಿ 100ಕ್ಕೆ 100ರಷ್ಟು ಫಲಿತಾಂಶ ಆಗಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದ್ದಾರೆ.
ಅವರು ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿ, ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಅಂಜನಾ ಕಾನಾಪೂರ 80.21%, ದ್ವಿತೀಯ ಸ್ಥಾನ ಪ್ರಭು ಕತ್ತಿ 83.71%, ತೃತೀಯ ಸ್ಥಾನ ಅಂಬಿಕಾ 82.11% ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ, ಕುಮಾರ ಹೆಬ್ಬಾಳ 80.00%, ದ್ವಿತೀಯ ಸ್ಥಾನ ಗಂಗಾ ಗಾಡಿ 78.57%, ತೃತೀಯ ಸ್ಥಾನ ಯುವರಾಜ ಎನ್. 78.24% ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದರಲ್ಲದೇ, ಗ್ರಾಮೀಣ ಭಾಗದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಉನ್ನತ ಶಿಕ್ಷಣ ದೊರಕಿಸಿ ಕೊಡುವ ಉದ್ದೇಶದಿಂದ, ಊರಿನ ಎಲ್ಲ ಗುರು-ಹಿರಿಯರು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಎಲ್ಲ ಸದಸ್ಯರು ಕೈಜೋಡಿಸಿದ ಪ್ರಯುಕ್ತ ನಮ್ಮ ಸಂಸ್ಥೆಯನ್ನು ಬಹಳ ಪ್ರಾಮಾಣಿಕವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದೇವೆ ಎಂದು ರವೀಂದ್ರ ಕಲಬುರ್ಗಿ ತಿಳಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಸ್.ರಾಮದುರ್ಗ, ಉಪಾಧ್ಯಕ್ಷ ಎಮ್.ಎಮ್. ಕಮ್ಮಾರ, ಕಾರ್ಯದರ್ಶಿ ಆರ್.ಜೆ.ರಾಮದುರ್ಗ, ಎಸ್.ಆರ್.ಜನಿವಾರದ, ಗಾಯತ್ರಿ ಪತ್ತಿನ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ಸಂಸ್ಥೆಯ ಆಡಳಿತಾಧಿಕಾರಿ ಎ.ಎಚ್. ಬೆಲ್ಲದ, ಪ್ರಾಚಾರ್ಯ ಎಸ್.ಎಸ್.ಹೊಸಮನಿ, ಎ.ಸಿ.ಅತ್ತಾರ ಸೇರಿದಂತೆ ಸಿಬ್ಬಂದಿ ವರ್ಗವದರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.