ಶೇ.98ರಷ್ಟು ಫಲಿತಾಂಶ

ಬಾದಾಮಿ, ಮೇ12: ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ ವಿದ್ಯಾಲಯದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ.98.68ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 76 ವಿದ್ಯಾರ್ಥಿಗಳ ಪೈಕಿ 75 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಸಂಜೋತಾ ವಾಸ್ಟರ್ 615 (ಶೇ.98.40) ಅಂಕದೊಂದಿಗೆ ಶಾಲೆಗೆ ಪ್ರಥಮ, ಲಕ್ಷ್ಮೀ ಮಹಾಲಿಂಗಪೂರ 606 (ಶೇ.96.96) ದ್ವಿತೀಯ, ಪ್ರಿಯಾಂಕಾ ಅಂಕದ 600 (ಶೇ.96) ಹಾಗೂ ಅಮೃತಾ ಅಂಗಡಿ 600 (ಶೇ.96) ಅಂಕದೊಂದಿಗೆ ತೃತೀಯ, ಸಿದ್ಧಾರ್ಥ ಕಡಿ 594 (ಶೇ.95.04) ಅಂಕಪಡೆದ ನಾಲ್ಕನೇಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಪ್ರಾಭಾರಿ ಪ್ರಾಚಾರ್ಯ ಶಂಕರರಾವ ಕುಲಕರ್ಣಿ, ಎಸ್‍ಡಿಎಂಸಿ ಅಧ್ಯಕ್ಷ ಶಿವಯ್ಯಾ ಹಿರೇಮಠ ತಿಳಿಸಿದ್ದಾರೆ.