ಶೇ 9.19 ಸೋಂಕು, ಶೇ 89.66 ಚೇತರಿಕೆ

ನವದೆಹಲಿ, ಮೇ ೨೭- ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿದ್ದ ಕೊರೋನಾ ಸೋಂಕು ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ನೆನ್ನೆಗಿಂತ ಇಂದು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಧೃಡಪಟ್ಟಿದೆ. ಸಾವಿನ ಸಂಖ್ಯೆ ಕೊಂಚ ಇಳಿಮುಖವಾಗಿದೆ.
ದೇಶದಲ್ಲಿ ಹೊಸದಾಗಿ ೨.೧೧ ಲಕ್ಷ ಮಂದಿಗೆ ಸೋಂಕು ಕಾಣಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿನ ಪ್ರತಿಶತ ೯.೧೯ ರಷ್ಟು ಇದೆ. ಜೊತೆಗೆ ಸೋಂಕಿನಿಂದ ಚೇತರಿಕೆ ಪ್ರಮಾಣ ಪ್ರತಿಶತ ೮೯.೬೬ ರಷ್ಟು ಇದೆ.
ಕಳೆದ ೨೪ ಗಂಟೆಗಳಲ್ಲಿ ೨,೧೧,೨೯೮ ಹೊಸದಾಗಿ ಸೋಂಕು ಸಂಖ್ಯೆ ಧೃಡಪಟ್ಟಿದ್ದು ,೩,೮೪೭ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದು ನಿನ್ನೆಗಿಂತ ತುಸು ಕಡಿಮೆಯಾಗಿದೆ ,ಜೊತೆಗೆ ಇದೇ ಅವಧಿಯಲ್ಲಿ ೨,೮೩,೧೩೫ ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ತಿಳಿಸಿದೆ.
ಇಂದು ೮ ಗಂಟೆ ತನಕ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಎಲ್ಲಿಯವರೆಗೆ ಸೋಂಕು ೨,೭೩,೬೯,೦೯೩ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ೨,೪೬,೩೩,೯೫೧ ಮಂದಿ ಚೇತರಿಸಿಕೊಂಡಿದ್ದಾರೆ
ದಿನನಿತ್ಯ ಕೊರೊನಾ ಸಾವಿನ ಸಂಖ್ಯೆ ಹಾವು ಎಣಿ ಆಟ ಆಡುತ್ತಿರುವ ಸಾವಿನ ಸಂಖ್ಯೆಯಿಂದ ದೇಶದಲ್ಲಿ ಇದುವರೆಗೆ ೩,೧೫,೨೩೫ ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಸೋಂಕು ಹೆಚ್ಚಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಮತ್ತು ಸಾವಿನ
ಸಂಖ್ಯೆ ಗಣನೀಯವಾಗಿ ಕುಸಿದಿದೆ. ನಿನ್ನೆ ೨೪,೫೭೨ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ೪೫೩ ಮಂದಿ ಸಾವನ್ನಪ್ಪಿದ್ದಾರೆ.
ಆದರೆ ಕರ್ನಾಟಕದಲ್ಲಿ ಮಾತ್ರ ನಿತ್ಯ ಸೋಂಕು ಮತ್ತು ಸಾವಿನ ಸಂಖ್ಯೆ ದೇಶದ ಇತರ ರಾಜ್ಯಗಳಿಗಿಂತ ಹೆಚ್ಚಾಗಿ ದಾಖಲಾಗುತ್ತಿರುವುದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಮತ್ತು ಆತಂಕಕ್ಕೆ ದೂಡಿದೆ.

ಕುಸಿದ ಸಕ್ರಿಯ ಪ್ರಕರಣ
ದೇಶದಲ್ಲಿ ದಿನದಿಂದ ದಿನಕ್ಕೆ ಚೇತರಿಕೆಯ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ.
ಸದ್ಯ ದೇಶದಲ್ಲಿ ೨೪,೧೯,೯೦೭ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದಿನನಿತ್ಯ ಸೋಂಕು ಮತ್ತು ಸಾವಿನ ಸಂಖ್ಯೆ ಏರಿಳಿತ ಕಾಣುತ್ತಿದೆ ಇದರಿಂದ ಸೋಂಕು ಹೆಚ್ಚಾಗುತ್ತಿದೆ. ಆದರೆ ನಿತ್ಯ ದಾಖಲಾಗುತ್ತಿರುವ ಸೋಂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಗುಣ ಮುಖರಾಗುತ್ತಿದ್ದಾರೆ

೨೦ ಕೋಟಿ ದಾಟಿದ ಲಸಿಕೆ
ದೇಶದಲ್ಲಿ ಕೊರೋನೋ ಸೋಂಕಿನ ಲಸಿಕೆ ಅಭಾವದ ನಡುವೆಯೂ ಇಲ್ಲಿಯ ತನಕ ದೇಶದಲ್ಲಿ ೨೦,೨೬,೯೫,೮೭೪ ಲಸಿಕೆ ಹಾಕಲಾಗಿದೆ.
ದೇಶದಲ್ಲಿ ೨೦ ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಲು ೧೨೪ ದಿನಗಳನ್ನು ತೆಗೆದುಕೊಂಡಿದೆ ಅಮೆರಿಕದಲ್ಲಿ ಇಷ್ಟೇ ಸಂಖ್ಯೆಯ ಜನರಿಗೆ ಲಸಿಕೆ ಹಾಕಲು ೧೩೦ ದಿನ ತೆಗೆದುಕೊಳ್ಳಲಾಗಿತ್ತು.
೧೮-೪೪ ವರ್ಷ ವಯೋಮಾನದವರಿಗೆ ಇಲ್ಲಿಯತನಕ ೧.೩೮ ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ