ಶೇ. 85ರಷ್ಟು ಸಹಕಾರಿ ಕ್ಷೇತ್ರ ಸದುಪಯೋಗ: ಸತೀಶಚಂದ್ರ

ಬಾಗಲಕೋಟ, ನ. 15 : ಸಹಕಾರ ಭಾರತಿ ಸಹಕಾರಿ ಕ್ಷೇತ್ರ ಅತ್ಯಂತ ವಿಶಾಲವಾಗಿದ್ದು ಸುಮಾರು 52 ವಿವಿಧ ಕ್ಷೇತ್ರಗಳಲ್ಲಿ ಸಹಕಾರಿ ಸಂಘಗಳಿವೆ. ದೇಶದ ಶೇ. 85 ರಷ್ಟು ಜನ ಸಹಕಾರಿ ಕ್ಷೇತ್ರದಲ್ಲಿದ್ದಾರೆ ಮತ್ತು ಅದರ ಸದುಪಯೋಗ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇದರಲ್ಲಿ ಅನೇಕ ಸಮಸ್ಯೆಗಳು ಇದ್ದು ಅದರ ಪರಿಹಾರಕ್ಕೆ ಒಂದು ವೇದಿಕೆಯಾಗಿ ಇಂದು ಸಹಕಾರ ಭಾರತಿ ಕಾರ್ಯ ಮಾಡುತ್ತಿದೆ ಎಂದು ಸಹಕಾರ ಭಾರತಿ ರಾಜ್ಯ ಅಧ್ಯಕ್ಷರಾದ ಸತೀಶಚಂದ್ರ ಅವರು ಹೇಳಿದರು.

ಅವರು ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕು ಸಮಿತಿಯ ಪದಾಧಿಕಾರಿಗಳ ಘೋಷಣೆ ಮಾಡಿ ಮಾತನಾಡಿದರು. ಇನ್ನೋರ್ವ ಅತಿಥಿಯಾದ ಮಂಜುನಾಥ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸಹಕಾರ ಭಾರತಿ ಹುಟ್ಟು ಮತ್ತು ಅದರ ಬೆಳವಣಿಗೆ ಕಾರ್ಯ ವಿಸ್ತಾರದ ಬಗ್ಗೆ ತಿಳಿಸಿದರು. ಮತ್ತೊಬ್ಬ ಅತಿಥಿ ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಅವರು ಸಹಕಾರಿ ತತ್ವಗಳ ಬಗ್ಗೆ ತಿಳಿಸಿದರು. ಜಿಲ್ಲಾ ಅಧ್ಯಕ್ಷರಾದ ಜಿ. ಎನ್. ಪಾಟೀಲ್ ಸಹಕಾರ ಭಾರತೀಯ ಸಂಘಟನೆ ಗ್ರಾಮೀಣ ಮಟ್ಟದಲ್ಲಿ ಗಟ್ಟಿಯಾಗಲಿ ಎಂದರು. ಉಪಾಧ್ಯಕ್ಷರಾದ ಹಂಡಿ ವಕೀಲರು ಸ್ವಾಗತಿಸಿದರು. ಅರವಿಂದ ಮಂಗಳೂರು ವಂದನಾರ್ಪಣೆ ಮಾಡಿದರು. ಜಯಂತ್ ಕುರಂದವಾಡ ಕಾರ್ಯಕ್ರಮ ನಿರೂಪಿಸಿದರು.