ಶೇ.5ಕ್ಕೂ ಕಡಿಮೆ ಬೆಂಗಳೂರು ಸೋಂಕು

ಬೆಂಗಳೂರು, ಜೂ.೮- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ನಿತ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇಕಡಾ ೫ ಕ್ಕಿಂತ ಕಡಿಮೆ ದಾಖಲಾಗಿದೆ.
ಬೆಂಗಳೂರಿನಲ್ಲಿ ಒಂದು ತಿಂಗಳ ನಂತರ ಶೇಕಡಾ ೪.೯೧ಪಾಸಿಟಿವಿ ಪ್ರಮಾಣ ದಾಖಲಾಗಿದೆ. ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅನ್ ಲಾಕ್ ಮಾಡುವ ಸಾದ್ಯತೆಗಳಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದು ವಾರಗಳ ಸರಾಸರಿ ಸೋಂಕಿನ ಪ್ರಕರಣಗಳನ್ನು ತುಲನೆಮಾಡಿ ಪಾಸಿಟಿವಿಟಿ ಪ್ರಮಾಣ ಶೇಕಡಾ ಐದಕ್ಕಿಂತ ಕಡಿಮೆ ದಾಖಲಾಗಿದೆ ಎನ್ನುವ ಸಂಗತಿ ಹೊರ ಹಾಕಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಯಾವ ಜಿಲ್ಲೆಗಳಲ್ಲಿ ಶೇಕಡಾ ಐದಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣ ಇರುತ್ತದೆ ಅಂತಹ ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲು ಸೂಚಿಸಿದೆ.
ಬೆಂಗಳೂರು ನಗರದಲ್ಲಿ ಕೈಗೊಂಡ ಬಿಗಿ ಕ್ರಮಗಳಿಂದಾಗಿ ಕೊರೊನಾ ಸಂಖ್ಯೆ ಪ್ರತಿನಿತ್ಯ ಕಡಿಮೆಯಾಗುತ್ತಿದೆ ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಬೇಕಾಗಿದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಬಿಬಿಎಂಪಿ ಆಯುಕ್ತ ತಿಳಿಸಿದ್ದಾರೆ.
ಪಾಸಿಟಿವಿಟಿ ಪ್ರಮಾಣ ಶೇಕಡಾ ಐದಕ್ಕಿಂತ ಕಡಿಮೆ ಆದ ತಕ್ಷಣ ಬೆಂಗಳೂರಿನಲ್ಲಿ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಇನ್ನಷ್ಟು ದಿನಗಳಕಾಲ ಪರಿಸ್ಥಿತಿಯನ್ನು ಅವಲೋಕನ ಮಾಡಲಾಗುವುದು ಈಗಿರುವ ಪ್ರಮಾಣ ಗಣನೀಯವಾಗಿ ಕಂಡ ನಂತರ ಸರ್ಕಾರ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ
ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕು ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿ ಬೆಂಗಳೂರಿನ ಜನರನ್ನು ಆತಂಕಕ್ಕೆ ಸಿಲುಕುವಂತೆ ಮಾಡಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಈ ಪ್ರಮಾಣ ಕುಸಿಯುತ್ತಿದೆ