ಶೇ. 40 ಬಡ್ಡಿ ರಿಯಾಯಿತಿ:ತೇಲ್ಕೂರ

ಕಲಬುರಗಿ,ಮಾ 23: ಮಧ್ಯಮಾವಧಿ ಸಾಲದ ಬಡ್ಡಿಯಲ್ಲಿ ಶೇ 40 ರಷ್ಟು ಮನ್ನಾ ಸೌಲಭ್ಯದ ಅವಕಾಶ ಕಲ್ಪಿಸಲಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ( ಡಿಸಿಸಿ) ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಕೋರಿದ್ದಾರೆ.
ಮಧ್ಯಮಾವಧಿ ಸಾಲದ ಕಂತು ಕಟ್ಟದ ರೈತರಿಗೆ ಈಗಾಗಲೇ ನೋಟಿಸ್ ನೀಡಿದ್ದರಿಂದ ಜತೆಗೆ ನ್ಯಾಯಾಲಯವು ರೈತರ ಆಸ್ತಿ ಹರಾಜು ಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಬ್ಯಾಂಕ್ ನ ಆಡಳಿತ ಮಂಡಳಿ ಬಡ್ಡಿಯಲ್ಲಿ ಶೇ. 40 ರಷ್ಟು ರಿಯಾಯಿತಿ ನೀಡಲು ಪ್ರಮುಖ ನಿರ್ಧಾರ ಕೈಗೊಂಡಿದೆ. ಆದ್ದರಿಂದ ರೈತರು ಅವಕಾಶದ ಸದುಪಯೋಗ ಪಡೆದುಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕೆಂದು ಕೋರಿದ್ದಾರೆ.ಬಡ್ಡಿಯಲ್ಲಿ ಶೇ. 40ರಷ್ಟು ಸಾಲ ಕಟ್ಟುವುದು ಕೊನೆ ಅವಕಾಶ ನೀಡಲಾಗಿದ್ದು, ಕಾರಣ ರೈತರು ಈ ಕೂಡಲೇ ಸಾಲ ಮರುಪಾವತಿಸುವ ಮುಖಾಂತರ ಹರಾಜುದಿಂದ ಪಾರಾಗಬೇಕೆಂದಿದ್ದಾರೆ.